ಅಂತರಾಷ್ಟ್ರೀಯ

ಕೈಯಲ್ಲಿ ಗನ್  ಹಿಡಿದು ಸೆಲ್ಫೀ ತೆಗೆಯಲು ಹೋದ ಯುವಕ ಗುಂಡೇಟಿಗೆ ಬಲಿ ! ಏನಿದು ಘಟನೆ ಮುಂದೆ ಓದಿ…

Pinterest LinkedIn Tumblr

selfi

ವಾಷಿಂಗ್ಟನ್: ಗನ್ ಟಾರ್ಗೆಟ್ ಇಟ್ಟು ಸೆಲ್ಫೀ ತೆಗೆಯಲು ಹೋಗಿ ಯುವಕನೊಬ್ಬ ಆಕಸ್ಮಿಕವಾಗಿ ಗುಂಡೇಟಿಗೆ ಬಲಿಯಾದ ಘಟನೆ ಅಮೆರಿಕದ ಹೂಸ್ಟನ್‍ನಲ್ಲಿ ನಡೆದಿದೆ.

ಡೇಲಿಯನ್ ಅಲೋನ್ಸೋ ಸ್ಮಿತ್ (19) ಮೃತ ದುರ್ದೈವಿ. ಗುಂಡುಗಳನ್ನು ಲೋಡ್ ಮಾಡಿದ್ದ ಗನ್ ಕುತ್ತಿಗೆಗೆ ಗುರಿಯಾಗಿಟ್ಟು ಸ್ಮಿತ್ ಸೆಲ್ಫೀ ತೆಗೆಯುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದ. ಆದರೆ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ ಮಾಡುವ ಬದಲಿಗೆ ಸ್ಮಿತ್ ಗನ್ ಹಿಡಿದ ಕೈಯಲ್ಲಿ ಟ್ರಿಗರ್ ಎಳೆದಿದ್ದ. ಇದು ಸ್ಮಿತ್ ಜೀವಕ್ಕೆ ಮಾರಕವಾಗಿ ಪರಿಣಮಿಸಿತು.

ಈ ಘಟನೆ ವೇಳೆ ಸ್ಮಿತ್ ಕುಟುಂಬದವರೊಬ್ಬರು ಇದೇ ಅಪಾರ್ಟ್‍ಮೆಂಟ್‍ನಲ್ಲಿದ್ದರು. ಆದರೆ ಘಟನೆ ನಡೆಯುವ ವೇಳೆ ಅವರು ಇನ್ನೊಂದು ರೂಮ್‍ನಲ್ಲಿದ್ದರು. ಇಂದು ಸ್ಮಿತ್ ಕಾಲೇಜು ಆರಂಭವಾಗಬೇಕಿತ್ತು. ಮೃತಪಟ್ಟ ಸ್ಮಿತ್‍ಗೆ ಇಬ್ಬರು ಮಕ್ಕಳಿದ್ದಾರೆ.

ಈ ವರ್ಷಾರಂಭದಲ್ಲಿ ರಷ್ಯಾದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ತಲೆಗೆ ಗನ್ ಗುರಿಯಿಟ್ಟು ಫೋಟೋ ಕ್ಲಿಕ್ಕಿಸುವ ವೇಳೆ ಗುಂಡು ಹಾರಿತ್ತು. ಆದರೆ ಆತ ತೀವ್ರ ಗಾಯಗೊಂಡಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕಿದ್ದ.

Write A Comment