ಅಂತರಾಷ್ಟ್ರೀಯ

ಇರಾನ್ ಅಣು ಒಪ್ಪಂದ :‘ಭಯೋತ್ಪಾದನೆಗೆ ಇಂಧನ’: ನೆತನ್ಯಾಹು

Pinterest LinkedIn Tumblr

1netanyahuಫ್ಲೋರೆನ್ಸ್(ಇಟಲಿ) ಆ.30: ಇರಾನ್‌ನ ಪರಮಾಣು ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಏರ್ಪಡಿಸುವ ಒಪ್ಪಂದವು ಜಾಗತಿಕ ಭಯೋತ್ಪಾದನೆಯನ್ನು ಹೆಚ್ಚಿಸುವಲ್ಲಿ ಇರಾನ್ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯವನ್ನು ಒದಗಿಸಲಿದೆ ಎಂದು ಇಸ್ರೇ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿಪ್ರಾಯಿಸಿದ್ದಾರೆ.
ಒಪ್ಪಂದದಡಿ ಇರಾನ್ ವಿರುದ್ಧದ ನಿರ್ಬಂಧಗಳು ತೆರವುಗೊಂಡಲ್ಲಿ ಆ ರಾಷ್ಟ್ರಕ್ಕೆ ಕೋಟ್ಯಂತರ ಡಾಲರ್‌ಗಳ ನೆರವು ದೊರೆತು ಜಾಗತಿಕವಾಗಿ ಭಯೋತ್ಪಾದನೆ ಅಧಿಕಗೊಳ್ಳಲು ಅದು ಕುಮ್ಮಕ್ಕು ನೀಡಲಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ನಿರ್ಬಂಧಗಳು ತೆರವುಗೊಂ  ಡಲ್ಲಿ ಇರಾನ್‌ಗೆ ಕೋಟ್ಯಂತರ ಡಾಲರ್ ಹರಿದು ಬರಲಿದೆ ಮತ್ತು ಇದು ಮಧ್ಯಪ್ರಾಚ್ಯ, ಉತ್ತರ ಆಫ್ರಿಕ ಹಾಗೂ ಅದಕ್ಕೂ ಆಚೆಗೆ ಭಯೋತ್ಪಾದನೆಯನ್ನು ಹಬ್ಬಿಸಲು ಅವಕಾಶ ಕಲ್ಪಿಸಲಿದೆ’’ ಎಂದವರು ವಿವರಿಸಿದ್ದಾರೆ.
ಪಶ್ಚಿಮದ ರಾಷ್ಟ್ರಗಳು ಹಾಗೂ ಇರಾನ್ ನಡುವೆ ಜುಲೈಯಲ್ಲಿ ಏರ್ಪಟ್ಟಿರುವ ಒಪ್ಪಂದಕ್ಕೆ ಅವರು ತನ್ನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಟಲಿಯ ಫ್ಲಾರೆನ್ಸ್‌ಗೆ ಭೇಟಿ ನೀಡಿದ ವೇಳೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಜೂನ್‌ನಲ್ಲಿ ಮರುಆಯ್ಕೆಯಾದ ಬಳಿಕ ಬೆಂಜಮಿನ್ ನೆತನ್ಯಾಹು ಇದೆ ೀ ಮೊದಲ ಬಾರಿಗೆ ಕೈಗೊಂಡಿರುವ ವಿದೇಶ ಪ್ರವಾಸದಲ್ಲಿ ನಾಲ್ಕು ದಿನಗಳ ಅವಧಿಗಾಗಿ ಇಟಲಿಗೆ ತೆರಳಿದ್ದಾರೆ.
‘‘ಇರಾನ್ ನಾಗರಿಕ ಪರಮಾಣು
ಾರ್ಯಕ್ರಮ ಅನುಸರಿಸುವುದನ್ನು ಇಸ್ರೇಲ್ ವಿರೋಧಿಸುವುದಿಲ್ಲ. ಆದರೆ ಕಳೆದ ಜುಲೈಯಲ್ಲಿ ಸ್ವಿಸ್ ನಗರ ಲಾಾನೆಯಲ್ಲಿ ಇರಾನ್‌ನೊಂದಿಗೆ ಪಶ್ಚಿಮದ ರಾಷ್ಟ್ರಗಳು ಏರ್ಪಡಿಸಿರುವ ಒಪ್ಪಂದದ ಅಂಶಗಳು ಸಂಪೂರ್ಣವಾಗಿ ಅನಗತ್ಯವಾಗಿದು್ದ, ಅವು ಇರಾನ್‌ಗೆ ಅಣ್ವಸ್ತ್ರ ತಯಾರಿಗೆ ಅವಕಾಶ ಕಲ್ಪಿಸಲಿವೆ’’ ಎಂದವರು ಹೇಳಿದ್ದಾರೆ.

Write A Comment