ಅಂತರಾಷ್ಟ್ರೀಯ

ಸೌದಿ ತೈಲ ಕಂಪೆನಿಯಲ್ಲಿ ಬೆಂಕಿ; 11 ಮಂದಿ ಬಲಿ

Pinterest LinkedIn Tumblr

2MideastSaudiArabiaFire-070e9ದುಬೈ, ಆ.30: ಸೌದಿ ಅರೇಬಿಯದ ತೈಲ ಕಂಪೆನಿ ಸೌದಿ ಅರಮ್ಕಗೆ ಸೇರಿದ ವಸತಿ ಸಂಕೀರ್ಣದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕಕ್ಕೆ ಕನಿಷ್ಠ ಇಬ್ಬರು ಬಲಿಯಾಗಿದ್ದು, ಇತರ 70 ಮಂದಿ ಗಾಯಗೊಂಡಿ ದ್ದಾರೆ ಎಂದು ಸೌದಿ ನಾಗರಿಕ ರಕ್ಷಣಾ ಪ್ರಾಧಿಕಾರ ತಿಳಿಸಿದೆ.
ಪೂರ್ವದ ಪಟ್ಟಣ ಖೊಬರ್‌ನಲ್ಲಿರುವ ಕಟ್ಟಡದಲ್ಲಿ ರವಿವಾರ ಮುಂಜಾ ನೆ ಬೆಂಕಿ ಕಾಣಿಸಿಕೊಂಡಿತ್ತು ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಉಂಟಾಗಲು ಕಾರಣವೇನೆಂಬುದರ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಮೃತಪಟ್ಟವರಲ್ಲಿ ವಿವಿಧ ರಾಷ್ಟ್ರಗಳ ಪ್ರಜೆಗಳು ಒಳಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದು, ಹೆಚ್ಚಿನ ವಿವರ ನೀಡಿಲ್ಲವೆನ್ನಲಾಗಿದೆ.
ಕೊಲ್ಲಿಯ ಇತರ ಹಲವು ತೈಲ ಕಂಪೆನಿಗಳಂತೆಯೇ, ಅರಮ್ಕ ಕೂಡಾ ತನ್ನ ಕಾರ್ಯಪಡೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ವಲಸಿಗ ಕಾರ್ಮಿಕರನ್ನು ಅವಲಂಬಿಸಿದೆ.

ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಟ್ಟಡದಲ್ಲಿ ಬೆಂಕಿ ವ್ಯಾಪಿಸುತ್ತಿದ್ದಂತೆ ದಟ್ಟ ಹೊಗೆ ಆವರಿಸಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿ ದ್ದರು ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. 30 ಆ್ಯಂಬುಲೆನ್ಸ್‌ಗಳು ಹಾಗೂ ಮೂರು ಹೆಲಿಕಾ ಪ್ಟರ್‌ಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದುದಾಗಿ ಅವರು ತಿಳಿಸಿದ್ದಾರೆ.ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ರಕ್ಷಣಾಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ. ದುರಂತಕ್ಕೀಡಾಗಿರುವ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಲಾಗಿತ್ತು ಮತ್ತು ಅದರಲ್ಲಿ ಪಾಶ್ಚಿಮಾತ್ಯ, ಏಶ್ಯನ್ ಹಾಗೂ ಸೌದಿ ಅರೇಬಿಯದ ಪ್ರಜೆಗಳು ವಾಸವಾಗಿದ್ದರು ಎನ್ನಲಾಗಿದೆ.
ಕಚ್ಚಾ ತೈಲ ಉತ್ಪಾದನೆ ಹಾಗೂ ರಫ್ತಿ ೆ ಸಂಬಂಧಿಸಿದಂತೆ ಅರಮ್ಕ ಜಗತ್ತಿನ ಅತಿದೊಡ್ಡ ತೈಲ ಕಂಪೆನಿಯಾಗಿದೆ. ಜಗತ್ತಿನ ಸಮಾರು 77 ರಾಷ್ಟ್ರಗಳಿಗೆ ಸೇರಿದ 61 ಸಾವಿರಕೂ್ಕ ಅಧಿಕ ಕಾರ್ಮಿಕರು ಈ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Write A Comment