ಕ್ರಿಕೆಟ್, ಫುಟ್ಬಾಲ್ ಮೈದಾನ ಆಯ್ತು. ಈಗ ಚೀಯರ್ ಗರ್ಲ್ಸ್ ಗಳು ಆಫೀಸಿಗೂ ಬಂದರು! ಇದು ಚೀನಾದ ಕತೆ ಸ್ವಾಮಿ.
ಸೋಷಿಯಲ್ ನೆಟ್ವರ್ಕಿನ ಸಿಂಡ್ರೋಮ್ಗೆ ತುತ್ತಾಗಿರುವ ಚೀನಾದ ಐಟಿ ಕಂಪನಿಗಳಲ್ಲಿ ವಿಶೇಷವಾಗಿ ಪುರುಷ ಸಿಬ್ಬಂದಿ ಮಹಿಳಾ ಉದ್ಯೋಗಿಗಳತ್ತ ನೋಡುವ ದೃಷ್ಟಿಕೋನವೇ ಬದಲಾಗಿದೆಯಂತೆ. ಅದರಲ್ಲೂ ಕಂಪ್ಯೂಟರ್ ಪ್ರೋಗ್ರಾಮರ್ಗಳು ನಿರೀಕ್ಷೆಗೆ ತಕ್ಕ ಕೆಲಸ ಮಾಡ್ತಿಲ್ವಂತೆ. ಅವರನ್ನು ಸೋಷಿಯಲೈಸ್ ಮಾಡಲು ಮತ್ತು ಕೆಲಸದತ್ತ ಹೆಚ್ಚು ಗಮನಹರಿಸುವಂತೆ ಮಾಡಲು ಚೀನೀ ಕಂಪನಿಗಳು ಚೀಯರ್ ಗರ್ಲ್ಸ್ ಗಳನ್ನು ಬಾಡಿಗೆಗೆ ಪಡೆಯುತ್ತಿವೆ.
ಪುರುಷ ಸಿಬ್ಬಂದಿ ಕುಳಿತಲ್ಲಿಗೆ ಚೀಯರ್ ಗರ್ಲ್ಸ್ ಗಳು ಬ್ರೇಕ್ ಫಾಸ್ಟ್ ತರುತ್ತಾರೆ, ತೀರಾ ಒತ್ತಡದಲ್ಲಿದ್ದಾಗ ನಕ್ಕು ಮಾತಾಡಿಸುತ್ತಾರೆ, ಹಾಗೂ ಬೇಜಾರಾದರೆ ಇವರೊಟ್ಟಿಗೆ ಟೇಬಲ್ ಟೆನಿಸನ್ನೂ ಆಡುತ್ತಾರೆ.