ನವದೆಹಲಿ: ಎನ್‌ಡಿಎ ಸರ್ಕಾರ ಬಿಡುಗಡೆ ಮಾಡಿರುವ 2011ರ ಜನಗಣತಿಯಲ್ಲಿ ದೇಶದಲ್ಲಿನ ಹಿಂದು ಜನಸಂಖ್ಯೆ ಶೇ.0.7ರಷ್ಟು ಕಡಿಮೆಯಾಗಿದ್ದು, ಮುಸ್ಲಿಂ ಜನಸಂಖ್ಯೆ ಶೇ.0.8ರಷ್ಟು ಹೆಚ್ಚಿರುವುದು ಬಹಿರಂಗಗೊಂಡಿದೆ.
2001- 2011ರ ಧಾರ್ಮಿಕ ಸಮುದಾಯಗಳ ಜನಗಣತಿಯ ಅಂಕಿ – ಅಂಶಗಳಿಂದ, ದೇಶದ ಒಟ್ಟು ಜನಸಂಖ್ಯೆಯು ಶೇ.17.7ರಷ್ಟು ಏರಿದ್ದು, ದೇಶದಲ್ಲಿನ ಇತರೆಲ್ಲ ಧಾರ್ಮಿಕ ಸಮುದಾಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಜನಸಂಖ್ಯಾ ವೃದ್ಧಿದರ ಹೆಚ್ಚಿದೆ.
ದೇಶದ ಒಟ್ಟು ಜನಸಂಖ್ಯೆಯು 2011ರಲ್ಲಿ 121.09 ಕೋಟಿ ಇರುವುದು ಅಂಕಿ-ಅಂಶಗಳಲ್ಲಿ ದಾಖಲಾಗಿದೆ. ಇದರಲ್ಲಿ ಹಿಂದುಗಳ ಜನಸಂಖ್ಯೆ 96.63 ಕೋಟಿ (79.8%) ಮುಸ್ಲಿಮರು 17.22 ಕೋಟಿ (14.2%), ಕ್ರೈಸ್ತರು 2.78 ಕೋಟಿ (2.3%). ಸಿಕ್ಖರು 2.08 ಕೋಟಿ (1.7%), ಬೌದ್ಧರು 0.84 ಕೋಟಿ (0.7%), ಜೈನರು 0.45 ಕೋಟಿ (0.4%), ಇತರ ಧರ್ಮೀಯರು ಮತ್ತು ಅನುಯಾಯಿಗಳು (ಓಆರ್‌ಪಿ) 0.79 ಕೋಟಿ (.07%) ಮತ್ತು ಧರ್ಮ ಘೋಷಣೆ ಮಾಡದವರು 0.29 ಕೋಟಿ (0.2%).