ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಹೀನಾಯ ಸೋಲಿನಿಂದ ಹತಾಶರಾಗಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಬಿಬಿಎಂಪಿ ‘ಚುನಾವಣೆಯಲ್ಲಿ ಭ್ರಷ್ಟರಿಗೇ ಗೆಲುವು ಸಿಕ್ಕಿದೆ. ಬೆಂಗಳೂರಿಗರು ಮತ್ತೆ ಭ್ರಷ್ಟರನ್ನೇ ಆರಿಸಿದ್ದಾರೆ’ ಎಂದು ಹೇಳಿದ್ದಾರೆ.
ಫಲಿತಾಂಶ ನಂತರ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, ‘ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ನಾವು ಬಯಲಿಗೆಳೆದಿದ್ದೆವು. ಜನರ ಮುಂದೆ ಸತ್ಯವನ್ನು ತೆರೆದಿಟ್ಟಿದ್ದೆವು. ಆದರೂ ಜನರು ಭ್ರಷ್ಟರ ಕೈಗೇ ಅಧಿಕಾರ ನೀಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪದ್ಮನಾಭನಗರದಲ್ಲಿ ಏಳು ಮಂದಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರೆಲ್ಲ ಕೆರೆ ನುಂಗಿರುವವರಾಗಿದ್ದು ಈ ಚುನಾವಣೆಯಲ್ಲಿ ಆರಿಸಿ ಬಂದಿರುವುದು ದುರಾದೃಷ್ಟಕರ ಎಂದು ಹೇಳಿರುವ ಕುಮಾರಸ್ವಾಮಿ ಅವರು, ಬೇಕಿದ್ದರೆ ಅವರ ವಿರುದ್ಧ ದಾಖಲೆ ನೀಡಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.