ವಾಷಿಂಗ್ಟನ್ : ಹಲವು ವಿಷಯಗಳಲ್ಲಿ ಪುರುಷರು ಮೊದಲಿದ್ದರೆ, ಮತ್ತೆ ಕೆಲವಲ್ಲಿ ಮಹಿಳೆಯರು ಎತ್ತಿದ ಕೈ. ಆದರೆ ಇಲ್ಲೇನಾಗಿದೆ ಎಂದರೆ ಡೈವೋರ್ಸ್ ನೀಡುವ ವಿಚಾರಗಳಲ್ಲಿ ಮಹಿಳೆಯರೇ ಪುರುಷರಿಗಿಂತ ಮುಂದಿದ್ದಾರೆ ಎಂದರೆ ನೀವು ನಂಬಲೇಬೇಕು.
ತೊಟ್ಟಿಲು ತೂಗುವ ಕೈ ಎಲ್ಲದಕ್ಕೂ ಸೈ ಎಂಬ ಮಾತಿದೆ. ಯಾವುದೇ ಕ್ಷೇತ್ರಗಳಿರಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕೆಲಸ ಮಾಡುತ್ತಾರೆ. ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆಯುವದರಲ್ಲಿ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಪುರುಷರಿಗೆ ಹೋಲಿಸಿದಾಗ ವಿಚ್ಛೇದನ ನೀಡಲು ಮಹಿಳೆಯರೇ ಹೆಚ್ಚಾಗಿ ಬಯಸುತ್ತಾರೆ. ಸ್ವಾನ್ ಫೋರ್ಡ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಪ ಪ್ರಾಧ್ಯಾಪಕ ಮೈಕಲ್ ರೋಸನ್ ಫೀಲ್ಡ್ ಅವರು 2009ರಿಂದ 2015ರವರೆಗೆ ಅಧ್ಯಯನ ನಡೆಸಿ ಅಮೆರಿಕದಲ್ಲಿ ದಂಪತಿಗಳ ಅಭಿಪ್ರಾಯ ಸಂಗ್ರಹಿಸಿದ್ದಾರೆ. 2262 ಮಂದಿಯನ್ನು ಅವರು ಅಧ್ಯಯನದ ಸಂದರ್ಭದಲ್ಲಿ ಭೇಟಿಯಾಗಿ ಅಭಿಪ್ರಾಯ ಪಡೆದಿದ್ದು, ಇವರಲ್ಲಿ 371 ಮಂದಿ 2015ರಲ್ಲಿ ಡೈವೋರ್ಸ್ ಪಡೆದಿದ್ದಾರೆನ್ನಲಾಗಿದೆ.
ಈ ಪ್ರಕರಣಗಳನ್ನೆಲ್ಲಾ ವಿಶ್ಲೇ಼ಷಿಸಿದಾಗ ಶೇ. 69ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಮುಂದಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿವಾಹೇತರ ಸಂಬಂಧಗಳಲ್ಲಿ ಇದು ಭಿನ್ನವಾಗಿದೆ. ಹೆಣ್ಣು, ಗಂಡು ಮದುವೆಯಾಗದೇ ಒಟ್ಟಿಗೆ ಇದ್ದರೆ ಇಬ್ಬರೂ ಕೂಡ ಸಮಾನವಾಗಿ ತಮ್ಮ ಸಂಬಂಧ ದೂರಮಾಡಿಕೊಳ್ಳಲು ಬಯಸುತ್ತಾರೆ ಎನ್ನಲಾಗಿದೆ.