ಅಂತರಾಷ್ಟ್ರೀಯ

ಪಾಕ್ ನಿಂದ ಎಗ್ಗಿಲ್ಲದೇ ಬರುತ್ತಿದೆ ನಕಲಿ ನೋಟು !

Pinterest LinkedIn Tumblr

noteಭಾರತದಲ್ಲಿ ಉಗ್ರ ಚಟುವಟಿಕೆ ನಡೆಸಲು ಉಗ್ರರಿಗೆ ಬೆನ್ನೆಲುಬಾಗಿ ನಿಂತಿರುವ ಪಾಕಿಸ್ತಾನ ಇದೀಗ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಲು ಮುಂದಾಗಿದ್ದು ರಾಮೇಶ್ವರಂ ನಲ್ಲಿ ಪಾಕ್ ಮುದ್ರಿತ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಸಮಯದಲ್ಲಿ ಈ ರಹಸ್ಯ ಹೊರಬಿದ್ದಿದೆ.

ಕಳೆದ ಕೆಲ ತಿಂಗಳಿನಿಂದ ರಾಮೇಶ್ವರಂ ನಲ್ಲಿ ನಕಲಿ ನೋಟುಗಳ ಚಲಾವಣೆ ಎಗ್ಗಿಲ್ಲದೇ ಸಾಗಿತ್ತು. ಅಲ್ಲದೇ ಈ ಕುರಿತಾಗಿ ಹಲವು ದೂರುಗಲೂ ಕೇಳಿ ಬಂದಿತ್ತು . ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮ್ಯಾಕ್ಸ್, ರಾಬರ್ಟ್, ಮುರಗನ್, ಯಾಸಿರ್ ಅರಾಫತ್ ಎಂಬ ಈ ನಾಲ್ವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇದರಲ್ಲಿ ಮುರಗನ್ ಎಂಬಾತ ಶ್ರೀಲಂಕಾದಿಂದ ಪಾಕ್ ಮುದ್ರಿತ ಭಾರತೀಯ ನೋಟುಗಳನ್ನು ತಂದು ಈ ಎಲ್ಲರ ಸಹಾಯದಿಂದ ಚಲಾವಣೆ ನಡೆಸುತ್ತಿದ್ದ ಎನ್ನಲಾಗಿದ್ದು, ತನಿಖೆಯ ಸಮಯದಲ್ಲಿ ಯಾಸಿರ್ ಅರಾಫತ್ ಎಂಬಾತ ಶ್ರೀಲಂಕಾದ ನಿರಾಶ್ರಿತ ಶಿಬಿರದ ಸದಸ್ಯನಾಗಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ.

Write A Comment