ಅಂತರಾಷ್ಟ್ರೀಯ

ಶಾರ್ಕ್ ದಾಳಿ ಮಾಡಿದರೂ ಅಂಜದೇ ಗೆಳತಿ ರಕ್ಷಿಸಿದ ಬಾಲಕಿ

Pinterest LinkedIn Tumblr

sharkಮಿಯಾಮಿ: ಅಪಾಯ ಎದುರಾದಾಗ ಯಾರಿಗೇನಾದರೂ ಆಗಲಿ ನಮ್ಮ ಪ್ರಾಣ ಉಳಿದರೆ ಸಾಕು ಎನ್ನುವ ಮಂದಿಯೇ ಜಾಸ್ತಿ. ಸಮಸ್ಯೆ ಆಗಿರುವುದು ಅವರಿಗೆಲ್ಲವೇ? ನನಗೇನೂ ಆಗಿಲ್ಲವಲ್ಲ ಎಂಬ ಮನೋಭಾವ ಇರುವವರು ಕಡಿಮೆಯೇನಿಲ್ಲ. ಅಪಾಯದಲ್ಲಿರುವವರನ್ನು ರಕ್ಷಿಸುವುದಕ್ಕಿಂತ ದೂರ ನಿಂತು ನೋಡುವ ಮನೋಭಾವದವರೂ ಇರುತ್ತಾರೆ.

ಆದರೆ ಇಲ್ಲೊಬ್ಬ ಬಾಲಕಿ ತಾನು ಸಂಕಷ್ಟಕ್ಕೆ ಸಿಲುಕಿದ್ದರೂ ಗೆಳತಿಯನ್ನ ಸಂಕಷ್ಟದಿಂದ ಪಾರು ಮಾಡಿದ್ದಾಳೆ. ಸಮುದ್ರ ತಟದಲ್ಲಿ ಈಜಾಡುತ್ತಿದ್ದ ಅಮೆರಿಕದ ಬಾಲಕಿ ಶಾರ್ಕ್ ದಾಳಿಗೆ ತುತ್ತಾದರೂ ಧೃತಿಗೆಡದೆ ತನ್ನ ಸ್ನೇಹಿತೆಯನ್ನು ಶಾರ್ಕ್ ದಾಳಿಯಿಂದ ರಕ್ಷಿಸುವಲ್ಲಿ ಸಫಲಳಾಗಿದ್ದಾಳೆ. ಆ ಬಾಲಕಿ ಹೆಸರು ಕಾಲೆ ಸ್ಸಾಮ್ಯಾಕ್(10). ಅಮೆರಿಕದ ಜಾಕ್ಸನ್​ವಿಲ್ಲೆಯಲ್ಲಿದ್ದ ಸಮುದ್ರ ತಟಕ್ಕೆ ಕಾಲೆ ಹೋಗಿದ್ದಾಳೆ. ಆಕೆಯ ಸ್ನೇಹಿತೆ ಕೂಡ ಜೊತೆಗಿದ್ದಳು. ಇಬ್ಬರೂ ಈಜಾಡುತ್ತಿದ್ದಾಗ ದಿಢೀರನೆ ಬಂದ ಶಾರ್ಕ್ ವೊಂದು ಕಾಲೆ ಮೇಲೆ ದಾಳಿ ಮಾಡಿ, ಆಕೆಯ ಬಲಗಾಲಿಗೆ ಕಚ್ಚಿದೆ. ಅದೃಷ್ಟವಶಾತ್ ಶಾರ್ಕ್​ನ ಬಾಯಿಯಿಂದ ಪಾರಾದ ಆಕೆ ದಡ ಸೇರಿದ್ದಾಳೆ.

ಆದರೆ ಇದನ್ನು ತಿಳಿಯದ ಆಕೆಯ ಸ್ನೇಹಿತೆ ಈಜಾಡುತ್ತಲೇ ಇದ್ದಳು. ಆಕೆ ಶಾರ್ಕ್ ದಾಳಿಗೆ ತುತ್ತಾಗುವ ಅಪಾಯದ ಮುನ್ಸೂಚನೆ ಅರಿತ ಕಾಲೆ ತನಗೆ ಗಾಯವಾಗಿದ್ದರೂ ಲೆಕ್ಕಿಸದೇ, ತಕ್ಷಣವೇ ನೀರಿಗೆ ಹಾರಿ, ತನ್ನ ಸ್ನೇಹಿತೆಯನ್ನು ಶಾರ್ಕ್ ದಾಳಿಯಿಂದ ಪಾರುಮಾಡಿಕೊಂಡು ದಡಕ್ಕೆ ಕರೆತಂದಿದ್ದಾಳೆ. ನಂತರ ಕಾಲೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶಾರ್ಕ್​ನ ಹಲ್ಲುಗಳು ಆಕೆಯ ಕಾಲಿನಲ್ಲಿ ತುಂಬಾ ಆಳಕ್ಕೆ ಕಚ್ಚಿದ್ದರಿಂದ ಒಂದು ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ 90 ಹೊಲಿಗೆ ಹಾಕಲಾಗಿದೆ. ಕಾಲೆ ಚೇತರಿಸಿಕೊಳ್ಳುತ್ತಿದ್ದು, ಮೊದಲಿನಂತೆ ಆಗಲಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.

Write A Comment