ಅಂತರಾಷ್ಟ್ರೀಯ

ಬ್ರಿಟನ್‌ನ ಷೋರೆಹಮ್‌ ಏರ್‌ಷೋ ವೇಳೆ ಘಟನೆ; ರಸ್ತೆಗಪ್ಪಳಿಸಿದ ವಿಮಾನ: 7 ಸಾವು

Pinterest LinkedIn Tumblr

vimana-duranthaಲಂಡನ್‌ (ಐಎಎನ್‌ಎಸ್‌): ಬ್ರಿಟನ್‌ನ ಷೋರೆಹಮ್‌ ಏರ್‌ಷೋ ವೇಳೆ ಜೆಟ್‌ ವಿಮಾನ ಪತನಗೊಂಡು ವಾಹನಗಳ ಮೇಲೆ ಅಪ್ಪಳಿಸಿ ಏಳು ಮಂದಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಪಶ್ಚಿಮ ಸಸೆಕ್ಸ್‌ ಪ್ರದೇಶದ ‘ಎ27’ ಸಮೀಪ ವಿಮಾನ ಪತನಗೊಂಡಿದೆ. ರಸ್ತೆಗಪ್ಪಳಿಸುತ್ತಲೇ ವಿಮಾನ ಸ್ಫೋಟಗೊಂಡಿದೆ ಎಂದು ತುರ್ತು ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ವಾಯು ಪ್ರದರ್ಶನದ ಕಸರತ್ತು ನಡೆಸುತ್ತಿದ್ದ ವೇಳೆ ವಿಮಾನ ಪೈಲಟ್‌ನ ನಿಯಂತ್ರಣ ಕಳೆದುಕೊಂಡು ರಸ್ತೆಗಪ್ಪಳಿಸಿತು. ತಕ್ಷಣವೇ ವಿಮಾನ ಸ್ಫೋಟಗೊಂಡಿತು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Write A Comment