ಅಂತರಾಷ್ಟ್ರೀಯ

ಫಿಕಾಂ ‘ಎನರ್ಜಿ 653’ ಸ್ಮಾರ್ಟ್‍ಫೋನ್ ಬಿಡುಗಡೆ

Pinterest LinkedIn Tumblr

smartಚೀನಾದ ಪ್ರಮುಖ ದೂರಸಂಪರ್ಕಗಳ ಉಪಕರಣ, ಟರ್ಮಿನಲ್‍ಗಳು ಹಾಗೂ ಸೇವೆಗಳನ್ನು ಒದಗಿಸುವ ಕಂಪನಿ ಫಿಕಾಂ, ಭಾರತದಲ್ಲಿ ತನ್ನ ಹೊಸ 4ಜಿ ಎಲ್‍ಟಿಇ ಆ್ಯಂಡ್ರಾಯ್ಡ್ ಸ್ಮಾರ್ಟ್‍ಫೋನ್ ಫಿಕಾಂ ಎನರ್ಜಿ 653ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ.

ಅನೇಕ ವೈಶಿಷ್ಟ್ಯತೆಗಳಿಂದ ಕೂಡಿರುವ, ಕ್ವಾಲ್‍ಕಾಂ ಟೆಕ್ನಾಲಜೀಸ್ ಇಂಕ್. (ಕ್ಯೂಟಿಐ)ನಿಂದ ಕ್ವಾಲ್‍ಕಾಂ ಉಲ್ಲೇಖಿತ ವಿನ್ಯಾಸವನ್ನು ಆಧರಿಸಿದ ಈ ಸ್ಮಾರ್ಟ್‍ಫೋನ್, 1280 x 720 ಪಿಕ್ಸೆಲ್‍ಗಳ ರೆಸಲ್ಯೂಷನ್ (ಐಪಿಎಸ್) ಜೊತೆಗೆ, 5.0 ಇಂಚುಗಳ ಹೆಚ್‍ಡಿ ಡಿಸ್‍ಪ್ಲೆಗಳನ್ನು ಹೊಂದಿದೆ ಹಾಗೂ 4ಜಿ ಎಲ್‍ಟಿಇ ತಂತ್ರಜ್ಞಾನದ ಜೊತೆ ಕ್ವಾಲ್‍ಕಾಂಲ ಸ್ನ್ಯಾಪ್‍ಡ್ರ್ಯಾಗನ್™ 210 ಪ್ರಾಸೆಸರ್ ಒಳಗೊಂಡಿದೆ. ಕ್ವಾಲ್‍ಕಾಂ ಸ್ನ್ಯಾಪ್‍ಡ್ರ್ಯಾಗನ್, ಕ್ವಾಲ್‍ಕಾಮ್ ಇನಕಾರ್ಪೊರೇಟೆಡ್‍ನ ಅಂಗ ಸಂಸ್ಥೆಯಾದ ಕ್ವಾಲ್‍ಕಾಂ ಟೆಕ್ನಾಲಜೀಸ್ ಇಂಕ್‍ನ ಉತ್ಪನ್ನವಾಗಿದೆ. ಫಿಕಾಂ ಎನರ್ಜಿ 653, ಹಿಂಬದಿಯಲ್ಲಿ ಎಲ್‍ಇಡಿ ಫ್ಲ್ಯಾಶ್‍ನೊಂದಿಗೆ 8 ಮೆಗಾಪಿಕ್ಷೆಲ್‍ಗಳ ಕ್ಯಾಮೆರಾ ಹಾಗೂ ಮುಂಬದಿಯಲ್ಲಿ 2 ಮೆಗಾಪಿಕ್ಸೆಲ್‍ಗಳ ಕ್ಯಾಮೆರಾಗಳನ್ನು ಹೊಂದಿದೆ.

ಫಿಕಾಂ ಎನರ್ಜಿ 653ನ, ಆ್ಯಂಡ್ರಾಯ್ಡ್ ಲಾಲಿಪಪ್ ಮೇಲೆ ಫಿಕಾಂನ ಸ್ವಂತ ಇಘಿPಇಅಖಿ 5.0 ಯುಐ ಹಾಗೂ ವಿಶೇಷ ಊ.265 ಊಚಿಡಿಜತಿಚಿಡಿe ಆeಛಿoಜeಡಿ ವೈಶಿಷ್ಟ್ಯತೆಗಳು, ಗ್ರಾಹಕರಿಗೆ, ಸುಧಾರಿತ ವೀಕ್ಷಣಾ ಅನುಭವದೊಂದಿಗೆ, ಕಡಿಮೆ ಬ್ಯಾಂಡ್‍ವಿಡ್ತ್ ಬಳಕೆಯ ಮೂಲಕ, ಶಕ್ತಿಶಾಲಿ ಮಲ್ಟಿಟಾಸ್ಕಿಂಗ್ ಸಾಧನವನ್ನು ಒದಗಿಸುತ್ತದೆ.

‘ಎನರ್ಜಿ 653’ ಬಿಡುಗಡೆ ಮಾಡಿ ಮಾತನಾಡಿದ, ಫಿಕಾಂನ ಸಿಇಒ ಝೆಂಗ್ ಮಿನ್ ಅವರು, ಫಿಕಾಂ ಎನರ್ಜಿ 653 ಬಿಡುಗಡೆಯೊಂದಿಗೆ, ಭಾರತದಲ್ಲಿ ನಮ್ಮ ಎರಡನೆಯ ಸ್ಮಾರ್ಟ್‍ಫೋನ್‍ನ್ನು ಬಿಡುಗಡೆ ಮಾಡಿದಂತಾಗಿದೆ. ಫಿಕಾಂನ ಬಲಿಷ್ಠವಾದ ಸಂಶೋಧನಾ ಹಾಗೂ ಅಭಿವೃದ್ಧಿ ತಂಡ, ವಿಶೇಷವಾಗಿ ಭಾರತೀಯ ಗ್ರಾಹಕರಿಗಾಗಿಯೇ ಶಕ್ತಿಶಾಲಿಯಾದ ಸಾಧನವನ್ನು ಸೃಷ್ಟಿಸಿದ್ದಾರೆ. ಭಾರತದಲ್ಲಿನ ಗ್ರಾಹಕರ ಅಗತ್ಯಗಳು ಹಾಗೂ ಮಾರುಕಟ್ಟೆ ವಿಶ್ಲೇಷಣೆಗಳ ಹೋಲಿಕೆಯೊಂದಿಗೆ ಫಿಕಾಂ, ಗ್ರಾಹಕರಿಗೆ ಅತ್ಯುತ್ತಮ ವೀಕ್ಷಣಾ ಅನುಭವ ಹಾಗೂ ಹೆಚ್ಚಿನ ವೈಶಿಷ್ಟ್ಯತೆಗಳುಳ್ಳ ಮೊಬೈಲ್ ಸಾಧನವನ್ನು ಒದಗಿಸುವ ಉದ್ದೇಶದಿಂದ, ಎನರ್ಜಿ 653 ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

Write A Comment