ಅಂತರಾಷ್ಟ್ರೀಯ

ನಿದ್ರಾಹೀನತೆಗೆ ಸಿಕ್ಕಿದೆ ಸೂತ್ರ

Pinterest LinkedIn Tumblr

nidra-fi‘ಸುಖ ನಿದ್ದೆ ಬೇಕು’ ಅನ್ನೋದು ಎಲ್ಲರ ಬಯಕೆ. ನೆಮ್ಮದಿಯ ನಿದ್ದೆಗಾಗಿ ಮಲಗುವ ಮುನ್ನ ಬಿಸಿನೀರಿನ ಸ್ನಾನ, ನಿದ್ದೆ ಮಾತ್ರೆ ಸೇವನೆ ಸೇರಿದಂತೆ ಸಾಕಷ್ಟು ಪ್ರಯೋಗಗಳಿಗೂ ಒಳಪಡುವವರಿದ್ದಾರೆ. ಆದರೆ ನಿದ್ದೆ ಮಾತ್ರ ಹತ್ತಿರ ಸುಳಿಯದೇ ಕಾಡುವುದಿದೆ. ಸರಿಯಾಗಿ ನಿದ್ದೆಯಾಗದಿದ್ದರೆ ಮನಸ್ಸಿಗೂ ನೆಮ್ಮದಿಯಿಲ್ಲ, ಕಚೇರಿಗೆ ಬಂದರೆ ಕೆಲಸ ಮಾಡಲು ಮನಸ್ಸಿರುವುದಿಲ್ಲ. ಇದರಿಂದ ದಿನಪೂರ್ತಿ ಕಿರಿಕಿರಿ. ಸುಖಕರವಾದ ನಿದ್ದೆಗೆ ಸಿಂಪಲ್ ಸಿಂಪಲ್ ಪರಿಹಾರ ಇಲ್ಲಿದೆ.

***

ನಿದ್ರಾಹೀನತೆಯ ಕಷ್ಟ ಅನುಭವಿಸಿದವರೇ ಬಲ್ಲರು. ಇಂತಹ ಸಮಸ್ಯೆಗೆ ಒಳಗಾದವರ ಬಗ್ಗೆ ಸುದೀರ್ಘ ಸಂಶೋಧನೆ ನಡೆಸಿದ ವಿಜ್ಞಾನಿಯೊಬ್ಬರು ಜಸ್ಟ್ ಆರವತ್ತೇ ಸೆಕೆಂಡುಗಳಲ್ಲಿ ಗಡದ್ದು ನಿದ್ದೆ ಬರುವ ಸೂತ್ರವೊಂದನ್ನು ಕಂಡುಕೊಂಡಿದ್ದಾರೆ. ಹಾಗಂತ ನಿದ್ದೆಗಾಗಿ ಯಾವುದೇ ಡ್ರಗ್ಸ್, ಮಾತ್ರೆ ಸೇವಿಸಬೇಕಿಲ್ಲ. ಮಲಗುವ ಕೋಣೆಯ ದೀಪ ಆರಿಸುವ ಪ್ರಮೇಯವೂ ಇರುವುದಿಲ್ಲ. 4-7-8 ಮಾದರಿಯ ಉಸಿರಾಟವನ್ನು ನಿಯಮಿತವಾಗಿ ಪಾಲಿಸಿದರೆ ಕುಂಭಕರ್ಣ ನಿದ್ದೆಗೆ ಶರಣಾಗಬಹುದು. ಇದರಿಂದ ನರವ್ಯೂಹಕ್ಕೆ ಜೀವತುಂಬಿ ದೇಹದ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸಬಹುದು ಎನ್ನುತ್ತಾರವರು.

ಅರಿಜೋನಾ ಮೂಲದ ಡಾ.ಆಂಡ್ರ್ಯೂ ವೆಯ್್ಲಈ ಸಂಶೋಧನೆಯ ರೂವಾರಿ. ಇದು ಅತ್ಯಂತ ಸರಳ. ಕೆಲಸದ ಒತ್ತಡದಲ್ಲಿವರು ಕೂಡ ಮಾಡಬಹುದು. ಯಾವುದೇ ಉಪಕರಣಗಳ ಸಹಾಯ ಬೇಕಿಲ್ಲ, ಅಲ್ಲದೇ ನಿರ್ದಿಷ್ಟವಾದ ಸ್ಥಳದ ಅಗತ್ಯವೂ ಇಲ್ಲ ಎಂಬುದು ಇವರ ಪ್ರತಿಪಾದನೆ. ಆಂಡ್ರ್ಯೂ ಪ್ರಕಾರ, 4-7-8 ಮಾದರಿಯಲ್ಲಿ ಉಸಿರಾಟಕ್ಕೂ ಮುನ್ನ ನಾಭಿಯಿಂದ ಉಸಿರನ್ನು ಹೊರಹಾಕಬೇಕು, ಆ ಬಳಿಕ ಬಾಯನ್ನು ಸಂಪೂರ್ಣ ಮುಚ್ಚಿ. ನಂತರ ಮೂಗಿನ ಮೂಲಕ ನಿಧಾನ ನಾಲ್ಕು ಬಾರಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬೇಕು. ನಂತರ ಉಸಿರಾಟ ನಿಲ್ಲಿಸಿ, ಮನಸ್ಸಿನಲ್ಲೇ ಏಳರ ತನಕ ಅಂಕಿಗಳ ಎಣಿಕೆ ಮಾಡಬೇಕು. ತರುವಾಯ ಬಾಯಿಯಿಂದ ಗಾಳಿಯನ್ನು ಹೊರಹಾಕಬೇಕು. 8 ಸೆಕುಂಡುಗಳ ಬಳಿಕ ಮತ್ತೊಮ್ಮೆ ದೀರ್ಘವಾಗಿ ಉಸಿರೆಳೆದುಕೊಳ್ಳಬೇಕು. ಈ ಪ್ರಕಾರವಾಗಿ ಮೂರು ಬಾರಿ ಪುನರಾರ್ವನೆ ಮಾಡಿದರೆ, ದೇಹಕ್ಕೆ ನಾಲ್ಕು ಬಾರಿ ಗಾಳಿ ಒಳಸೇರಿದಂತಾಗುತ್ತದೆ. ಪ್ರತಿ ಸಲ ಮೂಗಿನ ಮೂಲಕ ಉಸಿರನ್ನು ಒಳಕ್ಕೆ ಎಳೆದುಕೊಂಡು ಬಾಯಿಯಿಂದ ಗಾಳಿ ಹೊರಹಾಕಿದರೆ ಮನಸ್ಸು ಸ್ಥಿರತೆಯತ್ತ ವಾಲುತ್ತದೆ, ನಾಲಗೆ ಕೂಡ ಚಲನಶೀಲವಾಗದೆ ಸ್ಥಿರವಾಗಿರುತ್ತದೆ ಎಂಬುದು ಡಾ.ವೇಯ್್ಲಅವರ ಅನುಭವದ ಮಾತು.

ಈ ಪ್ರಯೋಗ ಮಾಡುವಾಗ ನಿಶ್ವಾಸದ ಪ್ರಕ್ರಿಯೆ ವೇಳೆ ಅದು ಉಚ್ಛಾ್ವಸಗಿಂತಲೂ ಎರಡು ಪಟ್ಟು ದೀರ್ಘವಾಗಿರುವಂತೆ ನೋಡಿಕೊಳ್ಳಬೇಕು. ಆದರೆ ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಎಂಬುದು ಮುಖ್ಯವಲ್ಲ. ಬದಲಾಗಿ ಪ್ರತೀ ಬಾರಿ ಕೂಡ 4-7-8 ರ ಮಾದರಿಯನ್ನು ಕ್ರಮಬದ್ಧವಾಗಿ ಅನುಸರಿಸಬೇಕು. ವಿಶೇಷವೆಂದರೆ, ಈ ತಂತ್ರವನ್ನು ಆಂಡ್ರ್ಯೂ ಹೊಸದಾಗಿ ಕಂಡುಹಿಡಿದಿದ್ದಲ್ಲ, ಬದಲಾಗಿ ಭಾರತೀಯ ಪ್ರಾಚೀನ ಪದ್ಧತಿ ‘ಪ್ರಾಣಾಯಾಮ’ದ ತತ್ವವನ್ನೇ ಇಲ್ಲಿ ಅಳವಡಿಸಿಕೊಂಡಿದ್ದಾರೆ. ಈ ಪದ್ಧತಿ ಮೇಲೆ 20 ವರ್ಷಕ್ಕೂ ಅಧಿಕ ಕಾಲ ಸಂಶೋಧನೆ ನಡೆಸಿ, ಈ ತೀರ್ವನಕ್ಕೆ ಬಂದಿದ್ದಾರೆ.

ಹಾವರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಯಾಗಿರುವ ಆಂಡ್ರ್ಯೂ ಪ್ರಕಾರ, 4-7-8 ಮಾದರಿಯು, ಶ್ವಾಸಕೋಶಕ್ಕೆ ಅಗತ್ಯವಾದ ಆಮ್ಲಜನಕವನ್ನು ಸೇರ್ಪಡೆಗೊಳಿಸಲು ಅತ್ಯಂತ ಪ್ರಬಲ ಮಾಧ್ಯಮವಾಗಿದೆ ಎಂದು ವೈಜ್ಞಾನಿಕವಾಗಿ ಆಧಾರಸಹಿತವಾಗಿ ನಿರೂಪಿಸಿದ್ದಾರೆ. ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾದರೆ, ದೇಹದ ನರವ್ಯೂಹ ವ್ಯವಸ್ಥೆ ಕ್ರಿಯಾಶೀಲಗೊಂಡು, ಮನಸ್ಸು ಶಾಂತಿಯನ್ನು ಹೊಂದುತ್ತದೆ. ನಿದ್ದೆಗೂ ಮುನ್ನ ಒತ್ತಡಕ್ಕೆ ಒಳಗಾದರೆ, ನರವ್ಯೂಹದಲ್ಲಿ ತೀವ್ರ ಘರ್ಷಣೆವುಂಟಾಗಿ ನಿದ್ದೆಯ ವ್ಯವಸ್ಥೆಯನ್ನೇ ಅಡಿಮೇಲು ಮಾಡುವುದರ ಜತೆಗೆ ನಿದ್ರಾಭಂಗಕ್ಕೂ ಕಾರಣವಾಗುತ್ತದೆ ಎಂಬುದು ಇವರ ವಿಶ್ಲೇಷಣೆ. ಆಂಡ್ರ್ಯೂ ಪ್ರತಿಪಾದಿಸುವ ನಿದ್ರಾ ವಿಧಾನದ ಪ್ರಕಾರ, ನಮ್ಮ ದೇಹದ ನರಮಂಡಲವನ್ನು ಸಕ್ರಿಯವಾಗಿ ಇರಿಸಬಹುದು. ಅಷ್ಟೇ ಅಲ್ಲದೇ, ಒತ್ತಡದಿಂದ ಹೊರಬರಲು ಉಪಕಾರಿ. ಆಂಡ್ರ್ಯೂ ಸ್ವತಃ ತಮ್ಮ ಮೇಲೆ ಇದನ್ನು ಅಳವಡಿಸಿಕೊಂಡಿದ್ದು, ಬಹಳಷ್ಟು ಸುಧಾರಣೆ ಕಂಡಿರುವುದಾಗಿ ತಿಳಿಸಿದ್ದಾರೆ. ದಿನಕ್ಕೆ ಎರಡು ಬಾರಿ ಈ ತಂತ್ರವನ್ನು ಅಳವಡಿಸಿಕೊಳ್ಳಿ. ಆರರಿಂದ ಎಂಟು ವಾರಗಳ ಕಾಲ ನಿಯಮಿತವಾಗಿ ಮಾಡಿದರೆ, ಹಾಸಿಗೆಯಲ್ಲಿ ಮಲಗಿದ ಆರವತ್ತೇ ಸೆಕುಂಡುನಲ್ಲಿ ಗಡದ್ದು ನಿದ್ದೆ ಗ್ಯಾರಂಟಿ. ಮತ್ತೇಕೆ ತಡ ? ಸರಿಯಾಗಿ ನಿದ್ದೆ ಬರದಿದ್ದರೆ ನೀವೂ ಕೂಡ ಒಮ್ಮೆ ಪ್ರಯತ್ನಿಸಿ ನೋಡಬಹುದು.

ಉಸಿರಾಟದ ವೇಳೆ ನೆನಪಿರಲಿ

ಉಸಿರನ್ನು ನಿಯಮಿತವಾಗಿ ಬಾಯಿಯ ಮುಖಾಂತರವೇ ಹೊರಹಾಕುವುದರ ಜತೆ ‘ವೂಶ್’ ಶಬ್ದ ಬರುವಂತೆ ನೋಡಿಕೊಳ್ಳಿ. ಉಸಿರನ್ನು ಒಳಕ್ಕೆ ಪಡೆಯುವ ವೇಳೆ ಬಾಯಿಯನ್ನು ಪೂರ್ತಿ ಮುಚ್ಚಬೇಕು. ಪ್ರತೀ ಸಲ ಉಸಿರು ತೆಗೆದುಕೊಳ್ಳುವ ವೇಳೆ 4-7-8 ಮಾದರಿಯನ್ನು ತಪ್ಪದೇ ಪಾಲಿಸಬೇಕು.

Write A Comment