ಅಂತರಾಷ್ಟ್ರೀಯ

ವಿಷ ಸರ್ಪದೊಂದಿಗೆ ಸೆಲ್ಫೀ: ಕಡಿತದಿಂದ 1.5 ಲಕ್ಷ$ ಆಸ್ಪತ್ರೆ ಬಿಲ್

Pinterest LinkedIn Tumblr

selfie-with-rattlesnake

ಲಾಸ್‌ಏಂಜಲೀಸ್: ವ್ಯಕ್ತಿಯೊಬ್ಬನ ಸೆಲ್ಫೀ ತೆಗೆಸಿಕೊಳ್ಳುವ ಹುಚ್ಚಿನಿಂದ ಲಕ್ಷಗಟ್ಟಲೆ ಆಸ್ಪತ್ರೆಗೆ ವ್ಯಯಿಸುವಂತಾಗಿದೆ!

ಘೋರ ವಿಷ ಸರ್ಪದೊಂದಿಗೆ ವ್ಯಕ್ತಿಯೊಬ್ಬ ಸೆಲ್ಫೀ ತೆಗೆದುಕೊಳ್ಳುವಾಗ ಕಚ್ಚಿಸಿಕೊಂಡಿದ್ದು, ಚಿಕಿತ್ಸೆಗೆ ಸುಮಾರು 1.5 ಲಕ್ಷ ಡಾಲರ್ ಖರ್ಚಾಗಿದೆ. ‘ದೇಹ ಸಂಪೂರ್ಣ ನಿಷ್ಕ್ರೀಯಗೊಂಡು, ಕಂಪಿಸುತ್ತಿದ್ದು, ಸುತ್ತುತ್ತಿದೆ. ನನ್ನ ನಾಲಿಗೆ ಬಾಯಿಯಿಂದ ಹೊರ ಹೋಗಿದೆ. ಕಣ್ಣು ಎಲ್ಲಿಯೋ ಬದಿಗೆ ಜಾರಿದೆ,’ ಎಂದು ಹಾವು ಕಚ್ಚಿಸಿಕೊಂಡ ಕ್ಯಾಲಿಫೋರ್ನಿಯಾದ ಫಾಸ್ಲರ್ ಹೇಳಿದ್ದಾರೆ.

ದೇಹದ ಪೂರ್ತಿ ವಿಷ ಹರಿದಿದ್ದು, ವಿಷ ತೆಗೆಯುವ ಔಷಧಿ ಪೂರೈಕೆ ಕೊರತೆಯಿಂದ ಫಾಸ್ಲರ್ ಎರಡು ಆಸ್ಪತ್ರೆಗಳನ್ನು ಬದಲಾಯಿಸುವಂತಾಯಿತು, ಎಂದು ಎಬಿಸಿಯ 10 ನ್ಯೂಸ್ ವರದಿ ಮಾಡಿದೆ. ಅಂತೂ ಇಂತೂ ಚಿಕಿತ್ಸೆ ಮುಗಿದಾಗ ಫಾಸ್ಲರ್ ಕೈಗೆ 153,161 ಡಾಲರ್ ಬಿಲ್ ಇತ್ತು.

ಮುಂಚೆ ಫಾಸ್ಲರ್ ಮನೆಯಲ್ಲಿಯೇ ವಿಷಕಾರಿ ಬುಡುಬುಡಿಕೆ ಹಾವೊಂದನ್ನು ಸಾಕಿದ್ದ. ಅದರಿಂದ ಒಮ್ಮೆ ಕಚ್ಚಿಸಿಕೊಂಡ ಅನುಭವವಾದ ನಂತರ ಕಾಡಿಗೆ ಬಿಟ್ಟಿದ್ದ. ‘ಕ್ಯಾಲಿಫೋರ್ನಿಯಾವೊಂದರಲ್ಲಿಯೇ ಸುಮಾರು 100 ವಿಷಸರ್ಪ ಕಚ್ಚಿದ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲಿ 10-12 ಪ್ರಕರಣಗಳು ಸ್ಯಾನ್ ಡಿಯಾಗೋ ಕೌಂಟಿಯಲ್ಲಿ ಸಂಭವಿಸುತ್ತದೆ,’ ಎಂದು ಕ್ಯಾಲಿಫೋರ್ನಿಯಾ ವಿವಿ ನಿರ್ದೇಶಕ ಡಾ.ರಿಚರ್ಡ್ ಕ್ಲಾರ್ಕ್ ಹೇಳುತ್ತಾರೆ.

Write A Comment