ರಾಷ್ಟ್ರೀಯ

ನಿತೀಶ್‌-ಲಾಲು ಮೈತ್ರಿಗೆ ಬಹುಮತ; ಬಿಹಾರ ಚುನಾವಣಾ ಪೂರ್ವ ಸಮೀಕ್ಷೆ: ಮೋದಿಗೆ ಶಾಕ್

Pinterest LinkedIn Tumblr

Former Chief Ministers of Bihar, RJD chief Lalu Prasad Yadav and JD-U leader Nitish Kumar during a rally in Hajipur of Bihar on Aug 11, 2014. (Photo: IANS)

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಕಾವು ನಿಧಾನವಾಗಿ ಹೇರುತ್ತಿದೆ. ಈ ಮಧ್ಯೆ ಜೆಡಿಯು- ಆರ್‌ಜೆಡಿ ಮೈತ್ರಿಕೂಟವು ಬಹುಮತ ಪಡೆಯಲಿದೆ ಎಂಬ ಚುನಾವಣಾಪೂರ್ವ ಸಮೀಕ್ಷೆಯೊಂದು ಹೊರಬಿದ್ದಿದ್ದು, ಬಿಜೆಪಿಗೆ ಶಾಕ್ ನೀಡಿದೆ.

ಬಿಹಾರದಲ್ಲಿ ನಿನ್ನೆಯಷ್ಟೇ ಚುನಾವಣಾ ಪ್ರಚಾರ ಮಾಡಿ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಸಿವಿಸಿಗೆ ಕಾರಣವಾಗಿದೆ. ಎಬಿಪಿ ನ್ಯೂಸ್‌-ನೀಲ್ಸನ್‌ ನಡೆಸಿರುವ ಸಮೀಕ್ಷೆ ಪ್ರಕಾರ ಒಟ್ಟು 243 ಸ್ಥಾನಗಳಲ್ಲಿ ಬಹುಮತಕ್ಕೆ 122 ಸ್ಥಾನಗಳ ಅವಶ್ಯಕತೆಯಿದೆ. ಜೆಡಿಯು-ಆರ್‌ಜೆಡಿ ಕೂಟ 129 ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು 112 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿದೆ.

ಸುಮಾರು 8,854 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ನಿತೀಶ್‌ ಮೆಚ್ಚಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಶೇ.52 ಜನರು ನಿತೀಶ್‌ ಕುಮಾರ್‌ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ. ಶೇ.42ರಷ್ಟು ಜನ ಬಿಜೆಪಿಯ ಸುಶೀಲ್‌ ಮೋದಿ ಮುಖ್ಯಮಂತ್ರಿಯಾಗಲಿ ಎಂದು ಹೇಳಿದ್ದಾರೆ.

Write A Comment