ಮನೋರಂಜನೆ

ಸಲ್ಮಾನ್ ಖಾನ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ: ಸಲೀಂ ಖಾನ್

Pinterest LinkedIn Tumblr

salim salman

ಮುಂಬೈ: 1993ರ ಮುಂಬೈ ಬಾಂಬ್ ಸ್ಫೋಟ ಸಂಬಂಧ ಮರಣದಂಡನೆ ಶಿಕ್ಷೆಗೊಳಗಾಗಿರುವ ಅಪರಾಧಿ ಯಾಕುಬ್ ಮೆಮನ್ ಪರವಾಗಿ ಸಲ್ಮಾನ್ ಮಾತನಾಡಿರುವುದು ಸರಿಯಿಲ್ಲ. ಸಲ್ಮಾನ್ ಮಾಡಿರುವ ಟ್ವೀಟ್’ಗಳನ್ನು ನಾನು ಬೆಂಬಲಿಸಲ್ಲ ಎಂದು ತಂದೆ ಸಲೀಮ್ ಖಾನ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿರುವುದು ಸರಿಯಲ್ಲ. ಸಲ್ಮಾನ್ ಖಾನ್ ಬರೆದಿರುವುದೆಲ್ಲವೂ ಅನರ್ಥಕಾರಿಯಾಗಿವೆ. ಈ ವಿಷಯದ ಬಗ್ಗೆ ಸಲ್ಮಾನ್ ಅಜ್ಞಾನಿಯಾಗಿದ್ದಾನೆ. ಜನರು ಈತನ ಮಾತನ್ನು ಗಂಭೀರವಾಗಿ ಪರಿಗಣಿಸಬಾರದು” ಎಂದು ಸಲ್ಮಾನ್ ಖಾನ್ ರ ತಂದೆ ಸಲೀಮ್ ಮನವಿ ಮಾಡಿಕೊಂಡಿದ್ದಾರೆ.

ಟ್ವೀಟರ್ ನಲ್ಲಿ ಸಲ್ಮಾನ್ ಬರೆದುಕೊಂಡಿದ್ದು ಹೀಗೆ…
ಕಳೆದ ಮೂರು ದಿನಗಳಿಂದ ಈ ರೀತಿ ಟ್ವೀಟ್ ಬರೆಯಲು ಇಚ್ಛಿಸಿದ್ದೆ. ಆದರೆ ಟ್ವೀಟ್ ಮಾಡಲು ಭಯ ಕಾಡುತ್ತಿತ್ತು. ಆದರೆ ಆತನನ್ನ ನಂಬಿಕೊಂಡು ಆತನ ಕುಟುಂಬವಿದೆ. ಸಹೋದರನನ್ನ ಗಲ್ಲಿಗೇರಿಸಬೇಡಿ, ತಲೆ ತಪ್ಪಿಸಿಕೊಂಡಿರುವ ಟೈಗರ್ ಮೆಮನ್ ನನ್ನ ಗಲ್ಲಿಗೇರಿಸಿ ಎಂದು ಟ್ವೀಟ್ ಮಾಡಿದ್ದಾರೆ.

Write A Comment