ಅಂತರಾಷ್ಟ್ರೀಯ

ವರ್ಲ್ಡ್ ಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆ

Pinterest LinkedIn Tumblr

kv-kamathಶಾಂಘೈ: ವಿಶ್ವಬ್ಯಾಂಕ್ ಗೆ ಪರ್ಯಾಯವಾಗಿ ಚೀನಾದಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪನೆಯಾಗಿದ್ದು, ಭಾರತ ಸೇರಿದಂತೆ ಎಲ್ಲಾ ಬ್ರಿಕ್ಸ್ ರಾಷ್ಟ್ರಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಹಣದ ಹೊಳೆ ಹರಿಯಲಿದೆ ಎಂದು ಬ್ರಿಕ್ಸ್ ನ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ನ ಮೊದಲ ಅಧ್ಯಕ್ಷ ಕೆ.ವಿ ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ.

ಚೀನಾದ ಹಣಕಾಸು ರಾಜಧಾನಿ ಶಾಂಘೈನಲ್ಲಿ ನಡೆದ ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು ಪ್ರವರ್ಧಮಾನಕ್ಕೆ ಬರುತ್ತಿರುವ  ರಾಷ್ಟ್ರಗಳ ಅಭಿವೃದ್ಧಿಗೆ ಹಣಕಾಸಿನ ನೆರವು ನೀಡುವ ದೃಷ್ಟಿಯಿಂದ 5 ಸಾವಿರ ಕೋಟಿ ಡಾಲರ್ ಬಂಡವಾಳದೊಂದಿಗೆ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದೆ ಎಂದು ಕನ್ನಡಿಗರಾಗಿರುವ ಕೆ.ವಿ ಕಾಮತ್ ಹೇಳಿದ್ದಾರೆ. ಮುಂದಿನ ಐದು ವರ್ಷ ಕೆ.ವಿ ಕಾಮತ್ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದೇ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

Write A Comment