ರಾಷ್ಟ್ರೀಯ

ಭಾರತದಲ್ಲಿ ಮುಸ್ಲಿಮನಾಗಿರುವುದೆಂದರೆ?

Pinterest LinkedIn Tumblr

Bakrieid_eps1ಭಾರತ ೧೮೦ ದಶಲಕ್ಷಕ್ಕೂ ಹೆಚ್ಚು ಮುಸ್ಲಿಮರಿಗೆ ಮನೆ. ಇದು ಜಾಗತಿಕವಾಗಿ ಮುಸ್ಲಿಮರ ಜನಸಂಖ್ಯೆಯಲ್ಲಿ ಶೇಕಡಾ ೧೦ ಭಾಗ.

ಶನಿವಾರವಷ್ಟೇ ಮುಸ್ಲಿಂ ಭಾಂಧವರು ಪವಿತ್ರ ರಂಜಾನ್ ತಿಂಗಳ ಕೊನೆಯ ದಿನವಾದ ಈದ್-ಉಲ್-ಫಿತರ್ ಸಂಭ್ರಮದಲ್ಲಿ ಭಾಗಿಯಾಗಿದ್ದರು. ‘ಈದ್ ಮುಬಾರಕ್’ ಹಬ್ಬಕ್ಕೆ ಶುಭಾಶಯ ಹೇಳುವ ಮಾತುಗಳು. ವಿಶ್ವದಾದ್ಯಂತ ಈ ಹಬ್ಬವನ್ನು ಅತಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ.

‘ಬಿಯಿಂಗ್ ಇಂಡಿಯನ್’ ಎಂಬುವ ಯುಟ್ಯೂಬ್ ಚಾನೆಲ್, ಭಾರತೀಯ ಮುಸ್ಲಿಮರಿಗೆ ಈದ್ ಶುಭಾಶಯ ತಿಳಿಸಿ, ಭಾರತದಲ್ಲಿ ಮುಸ್ಲಿಮರಾಗಿರುವುದು ಹೇಗನ್ನಿಸುತ್ತದೆ? ಎಂಬ ಪ್ರಶ್ನೆ ಹಾಕಿದೆ.

ಈ ವಿಡಿಯೋದಲ್ಲಿ ಭಾಗಿಯಾದವರಲ್ಲಿ ಕೆಲವರು ಹೇಳಿದ್ದು ಹೀಗೆ.

“ಇಸ್ಲಾಮಿನಲ್ಲಿ ಹೇಳಿರುವುದೆಲ್ಲವೂ ಸುಂದರ; ಅದರ ಬೋಧನೆಯನ್ನು ಕಲಿಯಲು ಎಲ್ಲರೂ ಪ್ರಯತ್ನಿಸಬೇಕು” ಎಂದಿದ್ದಾರೆ ಮೊಹಮ್ಮದ್ ಹನೀಫ್ ಕಾಝಿ ಇಬ್ರಾಹಿಮ್. ಕೆಲವು ದುಷ್ಕರ್ಮಿಗಳು ಕೆಲವು ಕೆಟ್ಟ ಆಯಾಮಗಳನ್ನು ಇದಕ್ಕೆ ತುರುಕುತ್ತಾರೆ ಆದರೆ ಧರ್ಮ ಅದನು ಬೋಧಿಸುವುದಿಲ್ಲ ಎಂದಿದ್ದಾರೆ.

ಹಲವಾರು ಜನ ಮುಸ್ಲಿಮರನ್ನು ಸಂಪ್ರದಾಯವಾದಿಗಳು ಮತ್ತು ಎಲ್ಲ ಮಹಿಳೆಯರು ಭುರ್ಕಾ ಧರಿಸುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಅದು ನಿಜವಲ್ಲ ಎಂದಿರುವ ಸನ ಹಮೀದ್ “ಎಲ್ಲರೂ ತೀವ್ರವಾದಿಗಳಲ್ಲ” ಎಂದು ಕೂಡ ತಿಳಿಸಿದ್ದಾರೆ.

“ಭಾರತದಲ್ಲಿ ನಾನು ಯಾವೊತ್ತು ಜನಾಂಗೀಯ ನಿಂದನೆ ಅನುಭವಿಸಿಲ್ಲ” ಎಂದಿದ್ದಾರೆ ಫಯಾಜ್ ನತ್ವಿ.

ಯಾರಿಗಾದರೂ ಇಸ್ಲಾಂಅನ್ನು ಸರಿಯಾಗಿ ಅಡವಳಿಕೊಂಡ ಮುಸ್ಲಿಂ ಗೆಳೆಯರಿದ್ದರೆ ಅವರಿಗೆ ಮುಸ್ಲಿಮರು ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂಬುದು ತಿಳಿಯುತ್ತದೆ ಎಂದಿದ್ದಾರೆ. ಅಲ್ಲದೆ ಇತರ ಧರ್ಮಗಳಂತೆ ಇಸ್ಲಾಂ ಕೂಡ ಒಳ್ಳೆಯ ವಿಷಯಗಳನ್ನು ಬೋಧಿಸುತ್ತದೆ ಎಂದಿದ್ದಾರೆ.

Write A Comment