ಅಂತರಾಷ್ಟ್ರೀಯ

1.6 ಮಿಲಿಯನ್ ಕಿ.ಮೀ ದೂರದಿಂದ ಭೂಮಿ ಹೀಗೆ ಕಾಣುತ್ತದೆ!

Pinterest LinkedIn Tumblr

earth_nasaವಾಷಿಂಗ್ಟನ್:  1.6 ಮಿಲಿಯನ್ ಕಿಲೋ ಮೀಟರ್ ದೂರದಿಂದ ತೆಗೆದ ಭೂಮಿಯ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ನಾಸಾದ ಡೀಪ್ ಸ್ಪೇಸ್ ಕ್ಲೈಮ್ಯಾಟ್  ಒಬ್ಸರ್ವೇಟರಿ (Deep Space Climate Observatory -DSCOVR) ಉಪಗ್ರಹದಲ್ಲಿರುವ Earth Polychromatic Imaging Camera (EPIC) ಕ್ಯಾಮೆರಾ ತೆಗೆದ ಭೂಮಿಯ ಫೋಟೋ ಇದಾಗಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಡಿಸ್ಕವರ್ ಭೂಮಿ ಮತ್ತು ಸೂರ್ಯನ ನಡುವಿನ ಗುರುತ್ವಾಕರ್ಷಣ ಬಲದಲ್ಲಿ ಸಮತೋಲನ ಕಾಪಾಡಿ ನಿಲ್ಲಲು ಆರಂಭಿಸಿತ್ತು. ಬಾಹ್ಯಾಕಾಶದಲ್ಲಿ ಇಲ್ಲಿಯವರೆಗೆ ಸೆರೆ ಹಿಡಿದ ಚಿತ್ರಗಳಲ್ಲಿ ಹೆಚ್ಚು ಸ್ಪಷ್ಟವಾಗಿರುವ ಚಿತ್ರ ಇದಾಗಿದೆ ಎಂದು ನಾಸಾ ಹೇಳಿದೆ.  ಜುಲೈ 6 ನೇ ತಾರೀಖಿನಂದು ಈ ಚಿತ್ರ ಕ್ಲಿಕ್ಕಿಸಲಾಗಿತ್ತು.

ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ಭಾಗಗಳಿಂದ 10 ಚಿತ್ರಗಳನ್ನು ತೆಗೆಯಲಾಗಿತ್ತು. ಅದರಲ್ಲಿ ಈ ಚಿತ್ರ ಹೆಚ್ಚು ಗಮನ ಸೆಳೆದಿದೆ. ನಾಸಾ ಬಿಡುಗಡೆ ಮಾಡಿದ ಈ ಚಿತ್ರವನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ಮಹನೀಯರು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಭೂಮಿಯಲ್ಲಿನ ಮರುಭೂಮಿ, ಪರ್ವತ ಹಾಗೂ ಸಸ್ಯಕಾಶಿ ಎಲ್ಲವೂ ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಬಹುದು.

Write A Comment