ಬಸ್ ನಲ್ಲಿ, ಟ್ರೈನ್ ನಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ ಘಟನೆಯ ಕುರಿತು ಸಾಕಷ್ಟು ಕೇಳಿದ್ದೀರಿ. ಆದರೆ ತುಂಬು ಗರ್ಭಿಣಿಯೊಬ್ಬಳು ಕಾರಿನಲ್ಲಿಯೇ ತಾಯಿಯಾದ ಘಟನೆ ನಡೆದಿದೆ.
ಹೌದು. ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು ಅಮೆರಿಕದ ಟೆಕ್ಸಾಸ್ ನಗರದಲ್ಲಿ ಜೋನಾಥನ್ ಎಂಬವರು ತನ್ನ ಪತ್ನಿ ಲೀಸಾರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ತುಂಬಾ ಟ್ರಾಫಿಕ್ ಇದ್ದ ಕಾರಣದಿಂದ ಆಸ್ಪತ್ರೆಗೆ ಹೋಗಲು ವಿಳಂಬವಾಗಿದ್ದು ಈ ನಡುವೆ ದಾರಿ ಮಧ್ಯದಲ್ಲಿಯೇ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಈ ಸಮಯದಲ್ಲಿ ಪತಿ ಕಂಗಾಲಾದರೂ ಸಹ ಏನೂ ಆಗುವುದಿಲ್ಲ. ಮಗು ಬರುತ್ತಿದೆ. ಹೆದರಬೇಡ ಎಂದು ಡ್ರೈವಿಂಗ್ ಮಾಡುತ್ತಲೇ ಆಕೆಯನ್ನು ಸಮಾಧಾನ ಮಾಡಿದ್ದಾನೆ. ಆದರೆ ಕಾರಿನಲ್ಲಿಯೆ ಆಕೆಗೆ ಹೆರಿಗೆಯಾಗಿದ್ದು ಆಸ್ಪತ್ರೆ ತಲುಪಿದ ತಕ್ಷಣ ವೈದ್ಯರು ತಾಯಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ್ದು ತಾಯಿ ಮಗುವಿಬ್ಬರೂ ಆರೋಗ್ಯವಾಗಿವೆ.
ಜೋನಾಥನ್ ಕಾರಿನಲ್ಲಿ ಗೋ ಪ್ರೋ ಕ್ಯಾಮೆರಾ ಅಳವಡಿಸಿದ್ದು, ಈ ಕ್ಯಾಮೆರಾ ಲೀಸಾ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿತ್ತು.ಆತ ಈ ವಿಡಿಯೋವನ್ನು ಯೂ ಟ್ಯೂಬ್ಗೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
