ರಾಷ್ಟ್ರೀಯ

ಮಾದಕ ಒಳ ಉಡುಪಿನ ಮೇಲೆ ಯುವತಿಯರ ಕಣ್ಣು

Pinterest LinkedIn Tumblr

dress

ಮದುವೆ ಅಂದ್ರೆ ಸಂಭ್ರಮ, ಸಡಗರ. ವಧುವಂತೂ ಮದುವೆಗೆ ಮುನ್ನ ಶಾಪಿಂಗ್ ಮಾಡೋದ್ರಲ್ಲಿ ಬ್ಯುಸಿ. ಯುವತಿಯರು ಮದುವೆಗೆ ಮುನ್ನ ಬಟ್ಟೆ, ಒಡವೆ ಖರೀದಿಯಲ್ಲಿ ಬಹಳ ಉತ್ಸಾಹ ತೋರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅಧ್ಯಯನವೊಂದು ಬೇರೆಯದನ್ನೇ ಹೇಳುತ್ತಿದೆ.

ಅಧ್ಯಯನದ ಪ್ರಕಾರ ಇತ್ತೀಚೆಗೆ ವಿವಾಹವಾಗುವ ಯುವತಿಯರು ಬಟ್ಟೆ, ಒಡವೆ ಜೊತೆಯಲ್ಲೇ ಮಾದಕ ಒಳ ಉಡುಪು ಖರೀದಿಯಲ್ಲಿ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರಂತೆ. ಸೆಕ್ಸಿ ಒಳ ಉಡುಪು ಖರೀದಿಸುವ ಯುವತಿಯರಲ್ಲಿ ಹೆಚ್ಚಿನವರು ಅದನ್ನು ಪತಿಯ ಮುಂದೆಯೇ ಧರಿಸಲು ಇಚ್ಛಿಸುತ್ತಾರೆ ಎನ್ನುತ್ತಿದೆ ಅಧ್ಯಯನ.

ಮೊದಲ ರಾತ್ರಿ ಪತಿಯಿಂದ ಮಾದಕ ಒಳ ಉಡುಪು ಉಡುಗೊರೆಯಾಗಿ ಸಿಕ್ಕರೆ ಅತೀ ಸಂತೋಷಪಡುವ ಮಹಿಳೆಯರು, ಮದುವೆಗಿಂತ ಮೊದಲು ನಡೆಯುವ ಬ್ಯಾಚುಲರ್ ಪಾರ್ಟಿಯಲ್ಲೂ ಒಳ ಉಡುಪಿಗೇ ಮೊದಲ ಆದ್ಯತೆ ನೀಡುತ್ತಾರೆ ಎನ್ನುತ್ತಿದೆ ಅಧ್ಯಯನ. ಸೆಕ್ಸಿ ಲಿಂಗರೀ ಆನ್ಲೈನ್ ಹೇಳುವ ಪ್ರಕಾರ ಮದುವೆಗಿಂತ ಮೊದಲು ಮಹಿಳೆಯರು ಆನ್ಲೈನ್ ನಲ್ಲೇ ಅತಿ ಹೆಚ್ಚು ಮಾದಕ ಒಳ ಉಡುಪು ಖರೀದಿಸುತ್ತಾರಂತೆ.

Write A Comment