ಅಂತರಾಷ್ಟ್ರೀಯ

ಶೇವಿಂಗ್ ಮೊರೆ ಹೋದ ಜಪಾನಿ ಮಹಿಳೆಯರು !

Pinterest LinkedIn Tumblr

saving

ಇಷ್ಟು ದಿನ ಪುರುಷರು ಮಾತ್ರ ಶೇವಿಂಗ್ ಮಾಡೋದನ್ನು ನೋಡಿದ್ದೇವೆ. ಆದರೆ ಮಹಿಳೆಯರೂ ಈಗ ಶೇವಿಂಗ್ ಮಾಡಿಕೊಳ್ಳೋಕೆ ಶುರು ಮಾಡಿದ್ದಾರೆ. ಜಪಾನ್ ನಲ್ಲಿ ಮಹಿಳಾ ಶೇವಿಂಗ್ ಸಲೂನ್ ಗಳೂ ಶುರುವಾಗಿವೆ.

ಸುಂದರ ಮುಖಕ್ಕಾಗಿ ಮಹಿಳೆಯರು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಫೇಶಿಯಲ್, ಅಪ್ಪರ್ ಲಿಪ್, ಐಬ್ರೋ ಹೀಗೆ ಹೊಳೆಯುವ ಮುಖಕ್ಕಾಗಿ ಗಂಟೆಗಟ್ಟಲೆ ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುತ್ತಾರೆ. ಆದರೆ ಜಪಾನಿ ಮಹಿಳೆಯರು ಹೊಸ ಉಪಾಯ ಕಂಡುಕೊಂಡಿದ್ದಾರೆ.

ಜಪಾನಿನಲ್ಲಿ ದಿನದಿಂದ ದಿನಕ್ಕೆ ಶೇವಿಂಗ್ ಮಾಡಿಕೊಳ್ಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಶೇವಿಂಗ್ ಮಾಡಿಕೊಳ್ಳುವುದರಿಂದ ಫೇಶಿಯಲ್ ನಂತರ ಕಾಣಿಸಿಕೊಳ್ಳುವ ಕೂದಲಿನ ಸಮಸ್ಯೆ ಇರುವುದಿಲ್ಲವಂತೆ.

ಮಹಿಳೆಯರಿಗಾಗಿ ಜಪಾನಿನಲ್ಲಿ ಶೇವಿಂಗ್ ಶಾಪ್ ತಲೆ ಎತ್ತುತ್ತಿವೆ. ಇದರಿಂದಾಗಿ ಶೇವಿಂಗ್ ಮಾಡಿಸಿಕೊಳ್ಳುವ ಮಹಿಳೆಯರ ಸಂಖ್ಯೆ ದ್ವಿಗುಣಗೊಂಡಿದೆ. ಮನೆಯಲ್ಲಿಯೇ ಕೆಲ ಮಹಿಳೆಯರು ಬ್ಲೇಡ್ ನಿಂದ ಶೇವಿಂಗ್ ಮಾಡಿಕೊಳ್ಳುತ್ತಿದ್ದಾರೆ. ಫೇಶಿಯಲ್ ನಂತರ ಕೆಲವರು ಶೇವಿಂಗ್ ಮಾಡಿಕೊಂಡರೆ, ಮತ್ತೆ ಕೆಲವರು ತಿಂಗಳಿಗೊಮ್ಮೆ ಶೇವಿಂಗ್ ಮಾಡಿಕೊಳ್ಳುತ್ತಿದ್ದಾರೆ.

Write A Comment