ಅಂತರಾಷ್ಟ್ರೀಯ

ಅಮೆರಿಕ ಡ್ರೋನ್ ದಾಳಿಯಲ್ಲಿ ಐಎಸ್ ನಾಯಕ ಸೇರಿ 24 ಉಗ್ರರು ಹತ

Pinterest LinkedIn Tumblr

ugrಇಸ್ಲಾಮಾಬಾದ್;  ಐಎಸ್ ಉಗ್ರಗಾಮಿ ಗುಂಪಿನ ಹಿರಿಯ ನಾಯಕ ಮತ್ತು ಪಾಕಿಸ್ತಾನದ ತಾಲಿಬಾನ್ ವಕ್ತಾರ ಸೇರಿ 24 ಮಂದಿ ಭಯೋತ್ಪಾದಕರು ಆಫ್ಘಾನಿಸ್ತಾನದಲ್ಲಿ ಅಮೆರಿಕದ ಡ್ರೋನ್ ದಾಳಿಯಲ್ಲಿ ಹತರಾಗಿದ್ದಾರೆ. ಪಾಕಿಸ್ತಾನಿ ಪೌರನಾದ ಶಾಹಿದುಲ್ಲಾ ಶಾಹಿದ್ ಐಎಸ್ ಡೆಪ್ಯುಟಿ ಮುಖ್ಯಸ್ಥನಾಗಿದ್ದು, ಅರೇಬಿಕ್‌ನಲ್ಲಿ ದಯೇಶ್ ಎಂದು ಹೆಸರಾಗಿದ್ದಾನೆ.

ನಗರ್‌ಹರ್‌ನಲ್ಲಿ ಉಗ್ರಗಾಮಿಗಳು ಅಡಗಿದ್ದ ತಾಣದ ಮೇಲೆ ಡ್ರೋನ್ ದಾಳಿಯಲ್ಲಿ ಒಟ್ಟು 24 ಉಗ್ರರು ಸತ್ತಿದ್ದಾರೆ.ಶಾಹಿದ್ ಪಾಕಿಸ್ತಾನ ತಾಲಿಬಾನ್ ವಕ್ತಾರನಾಗಿದ್ದು, ಕಳೆದ ವರ್ಷ ಆಂತರಿಕ ಕಲಹದಿಂದಾಗಿ ಐಎಸ್‌ಗೆ ಸೇರಿದ್ದ. ಶೇಕ್ ಮಕ್ಬೂಲ್ ಒರ್ಕಾಜಾಯ್ ಎಂದು ಕೂಡ ಹೆಸರಾದ ಅವನು ಪಾಕಿಸ್ತಾನದ ಒ ರ್ಕಾಜಾಯಿ ಬುಡಕಟ್ಟು ಪ್ರದೇಶಕ್ಕೆ ಸೇರಿದ್ದು, ದೇಶದಲ್ಲಿ ಭಯೋತ್ಪಾದನೆಯ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ.

ಆಫ್ಘನ್ ಅಧಿಕಾರಿ ಮತ್ತು ತಾಲಿಬಾನ್ ಉಗ್ರರ ನಡುವೆ ಪಾಕಿಸ್ತಾನ ಮಾತುಕತೆ ಆಯೋಜಿಸಿದ ಮರುದಿನವೇ ಡ್ರೋನ್ ದಾಳಿಯ ಸಂದರ್ಭ ಗಮನಾರ್ಹವಾಗಿದೆ.

Write A Comment