ರಾಷ್ಟ್ರೀಯ

ಐಎಎಸ್ ತೇರ್ಗಡೆಯಾದ ಪೊಲೀಸ್ ಪೇದೆ ಪತ್ನಿ

Pinterest LinkedIn Tumblr

polishಘಾಜಿಯಾಬಾದ್; ಉತ್ತರ ಪ್ರದೇಶದಲ್ಲಿ ಪೊಲೀಸ್‌ ಪೇದೆಯ ಪತ್ನಿಯೊಬ್ಬರು ಇತ್ತೀಚೆಗೆ ಘೋಷಣೆಯಾದ ಐಎಎಸ್‌ ಪರೀಕ್ಷಾ ಫಲಿತಾಂಶದಲ್ಲಿ ರ‍್ಯಾಂಕ್‌ ಪಡೆದು ತೇರ್ಗಡೆಯಾಗಿದ್ದಾರೆ. ಈ ಮೂಲಕ ಪತಿಯ ಕನಸನ್ನು ನನಸಾಗಿಸಿದ್ದಾರೆ.

1999ರಲ್ಲಿ ಪೊಲೀಸ್ ಪೇದೆ ಸಂದೀಪ್ ಅವರನ್ನು ವಿವಾಹವಾಗಿದ್ದ ಪೂನಂ ಆಗ ತಾನೇ 10 ನೇ ತರಗತಿಯನ್ನು ಪಾಸ್ ಮಾಡಿದ್ದಳು.

ಬಾಲ್ಯದಲ್ಲೇ ಮದುವೆ ಮತ್ತು ಎರಡು ಮಕ್ಕಳ ತಾಯಿಯಾಗಿದ್ದು ಪೂನಂ ಗುರಿಗೆ ಅಡ್ಡಿಯಾಗಲಿಲ್ಲ. ಪರಿಶ್ರಮದಿಂದ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ ಅವರು ಗಣಿತದಲ್ಲಿ ಎಮ್ಎಸ್ಸಿ ಪದವಿಯನ್ನು ಸಹ ಪಡೆದರು.

ಅವರ ಕನಸು ಅಲ್ಲಿಗೆ ನಿಲ್ಲಲಿಲ್ಲ. ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಹೊತ್ತು ತಮ್ಮ ಪರಶ್ರಮವನ್ನು ಮುಂದುವರೆಸಿದ ಅವರಿಗೆ ಪತಿ ಸಂಪೂರ್ಣ ಸಹಕಾರವನ್ನಿತ್ತಿದ್ದಾನೆ.

ಪತಿಗೆ ನಿರಾಶೆ ಮಾಡದ ಪೂನಂ ಐಎಎಸ್ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದು ಕುಟುಂಬದಲ್ಲಿ ಸಂತೋಷ, ಸಂಭ್ರಮ ಮನೆ ಮಾಡಿದೆ. ಪತ್ನಿ ಐಎಎಸ್‌ ಪರೀಕ್ಷೆ ಪಾಸು ಮಾಡುತ್ತಿದ್ದಂತೆ ಪತಿ ಸಂದೀಪ್‌ ಸಿಹಿ ಹಂಚಿ ಸಂಭ್ರಮ ಪಟ್ಟಿದ್ದಾರೆ.

Write A Comment