ರಾಷ್ಟ್ರೀಯ

ವ್ಯಾಪಂ ಹಗರಣ: ಮೃತ ಪತ್ರಕರ್ತನ ಮನೆಗೆ ಭೇಟಿ ನೀಡಿದ ಸಿಎಂ

Pinterest LinkedIn Tumblr

shivನವದೆಹಲಿ: ಬಹು ಚರ್ಚಿತ ವ್ಯಾಪಂ ಹಗರಣದ ತನಿಖಾ ವರದಿ ನಡೆಸಲು ಹೋದ ಸಂದರ್ಭದಲ್ಲಿ ಏಕಾಏಕಿ ಅಸ್ವಸ್ಥರಾಗಿ ಮೃತ ಪಟ್ಟ ಪತ್ರಕರ್ತ ಅಕ್ಷಯ್‌ ಸಿಂಗ್‌ ಅವರ ನಿವಾಸಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಭೇಟಿ ನೀಡಿದ್ದಾರೆ.

Vyapam Scam” width=”600″ />
ಇಂದು ಮುಂಜಾನೆ ನವದೆಹಲಿಯಲ್ಲಿರುವ ಪತ್ರಕರ್ತನ ಮನೆಗೆ ಆಗಮಿಸಿದ ಸಿಎಂ ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

“ಮಗನನ್ನು ಕಳೆದುಕೊಂಡಿರುವ, ತಾಯಿಯ ನೋವು ನನಗೆ ಅರ್ಥವಾಗುತ್ತದೆ. ಇದಕ್ಕಿಂತ ಬೇರೆ ನೋವು ಇಲ್ಲ. ಸಹೋದರನನ್ನು ಕಳೆದುಕೊಂಡು ನೊಂದಿರುವ ಸಹೋದರಿಗೆ ನಾನು ಅಣ್ಣನಾಗಿ ಎಲ್ಲ ನೆರವು ನೀಡಲು ಪ್ರಯತ್ನಿಸುತ್ತೇನೆ. ಅವರ ನೋವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಪರಿವಾರದ ಬೆನ್ನ ಹಿಂದೆ ನಾನು ಸದಾ ಇರುತ್ತೇನೆ. ಸರಕಾರದಿಂದ ಪರಿಹಾರಧನವನ್ನು ನೀಡಲಾಗುವುದು. ಅಕ್ಷಯ್‌ ಸಿಂಗ್‌ ಸಾವಿನ ನಿಷ್ಪಕ್ಷಪಾತ ತನಿಖೆಯನ್ನು ಕೈಗೊಳ್ಳಲಾಗುವುದೆಂಬ ಭರವಸೆ ನೀಡುತ್ತಿದ್ದೇನೆ. ಸಿಬಿಐ ತನಿಖೆ ಆಗಬೇಕೆಂಬುದು ನಮ್ಮ ಆಗ್ರಹ. ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದೇವೆ. ಸತ್ಯ ಹೊರ ಬರಬೇಕು ಅನ್ನುವುದೇ ನನ್ನ ಜೀವನದ ಘನ ಉದ್ದೇಶ”, ಎಂದು ಸಿಂಗ್ ಹೇಳಿದ್ದಾರೆ.

ಚೌಹಾಣ್‌, ಮೃತ ಸಿಂಗ್‌ ಅವರ ಕುಟುಂಬದ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡುವ ಭರವಸೆಯನ್ನು ಸಹ ನೀಡಿದರು.

ಆದರೆ ಸಿಂಗ್ ಕುಟುಂಬಸ್ಥರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿದ ವಾಗ್ದಾನವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. “ನಮ್ಮ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ಬೇಡ. ಸಿಂಗ್ ನಿಗೂಢ ಸಾವು ಪ್ರಕರಣದ ತನಿಖೆ ನಿಷ್ಪಕ್ಷವಾಗಿ ಆಗಲಿ. ಸಾವಿಗೆ ಕಾರಣರಾದವರ ವಿರುದ್ದ ಕಠಿಣ ಶಿಕ್ಷೆಯಾಗಲಿ. ಅದೇ ಸರ್ಕಾರ ನಮ್ಮ ಕುಟುಂಬಕ್ಕೆ ನೀಡುವ ದೊಡ್ಡ ಪರಿಹಾರ”, ಎಂದು ಸಿಂಗ್ ಕುಟುಂಬ ಹೇಳಿದೆ ಎಂದು ಹೇಳಲಾಗುತ್ತಿದೆ.

Write A Comment