ರಾಷ್ಟ್ರೀಯ

ವ್ಯಾಪ0 ಹಗರಣ: ನಮೃತಾಳದ್ದು ಆತ್ಮಹತ್ಯೆಯಲ್ಲ, ಕೊಲೆ

Pinterest LinkedIn Tumblr

namruಉಜ್ಜೈನ್; ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ನೇಮಕಾತಿ ಹಗರಣ ಹೊಸ ತಿರುವನ್ನು ಪಡೆದುಕೊಂಡಿದೆ. 2012 ರಲ್ಲಿ ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ನಮ್ರತಾ ದಾಮೋರ್ ಸಾವು ಆತ್ಮಹತ್ಯೆಯಲ್ಲ. ಕೊಲೆ ಎಂಬ ಸತ್ಯ ಬೆಳಕಿಗೆ ಬಂದಿದ್ದು, ಸರಣಿ ಸಾವುಗಳಲ್ಲಿ ಹೆಚ್ಚಿನವು ಕೊಲೆಯೇ ಎಂಬುದನ್ನು ಪುಷ್ಠಿಕರಿಸುತ್ತಿದೆ.

46ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಹಗರಣವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಇಂದೋರ್‌ನ ಸರ್ಕಾರಿ ವೈದ್ಯಕೀಯ ಕಾಲೇಜ್ ನಲ್ಲಿ ನಮ್ರತಾ ವ್ಯಾಸಂಗ ಮಾಡುತ್ತಿದ್ದಳು. ವ್ಯಾಪಮ್ ಅಡಿಯಲ್ಲಿ ಅಕ್ರಮವಾಗಿ ಆಕೆ ವೈದ್ಯಕೀಯ ಸೀಟು ಪಡೆದಿದ್ದಳು ಎಂಬ ಶಂಕೆ ಇದೆ.

ಆಕೆ 2012ರಲ್ಲಿ ಉಜ್ಜೈನ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಆಕೆಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಅದೊಂದು ಆತ್ಮಹತ್ಯೆ ಎಂದು ವರದಿ ನೀಡಿದ್ದರು. ಆದರೆ ಈಗ ಅದು ವ್ಯವಸ್ಥಿತ ಕೊಲೆ, ವರದಿಯನ್ನು ವೈದ್ಯರು ತಿರುಚಿದ್ದರು ಎಂಬ ಸತ್ಯ ಬಯಲಾಗಿದೆ. ಪೊಲೀಸರು ಪ್ರಕರಣದ ಮರು ತನಿಖೆ ಆರಂಭಿಸಿರುವಂತೆಯೇ ನಮ್ರತಾ ಮರಣೋತ್ತರ ಪರೀಕ್ಷೆ ವರದಿ ಕೈಸೇರಿದೆ.

ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು, ಆಕೆಯ ಮುಖದ ಮೇಲೆ ಉಗುರುಗಳ ಗುರುತಿರುವುದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿದು ಬಂದಿದೆ. ನಮ್ರತಾ ಸಾವು ಆತ್ಮಹತ್ಯೆಯೆಂದು ನಾವು ಎಂದೂ ಹೇಳಿರಲಿಲ್ಲ ಎಂದು ವೈದ್ಯರೀಗ ಹೇಳುತ್ತಿದ್ದಾರೆ.

45ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಹಗರಣವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

‘ನಮೃತಾ ದಾಮೋರ್ ಅವರ ಪ್ರಕರಣದ ಮರು ಪರಿಶೀಲನೆಗೆ ನಾವು ಆದೇಶಿಸಿದ್ದೇವೆ. ತರನಾದ ಉಪವಿಭಾಗೀಯ ಪೊಲೀಸ್ ಅಧಿಕಾರಿ ಆರ್‌.ಕೆ.ಶರ್ಮಾ ಅವರು ಪ್ರಕರಣವನ್ನು ಮರು ತನಿಖೆ ನಡೆಸಲಿದ್ದಾರೆ’ ಎಂದು ಉಜ್ಜೈನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಹರ್‌ ಸಿಂಗ್ ವರ್ಮಾ ಅವರು ತಿಳಿಸಿದ್ದಾರೆ.

Write A Comment