ರಾಷ್ಟ್ರೀಯ

ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ‘ವಿಮೆ ರಕ್ಷೆ’

Pinterest LinkedIn Tumblr

puc* ಗೌತಮಿ ಪ್ರಕರಣದಿಂದ ಎಚ್ಚೆತ್ತ ಇಲಾಖೆ * ರಾಜ್ಯದಲ್ಲಿ 3,800 ಕಾಲೇಜು, 8 ಲಕ್ಷ ವಿದ್ಯಾರ್ಥಿಗಳು * ಇಲಾಖೆಯಿಂದ 2015, ಜೂ.17ರಂದು ಸುತ್ತೋಲೆ * ಮೊದಲು ಖಾಸಗಿ, ನಂತರ ಸರಕಾರಿ ಕಾಲೇಜುಗಳಲ್ಲಿ ಜಾರಿ

* ಕೃಷ್ಣ ಎನ್.ಲಮಾಣಿ, ಹೊಸಪೇಟೆ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನು ‘ವಿಮಾ ಭಾಗ್ಯ’ಸಿಗಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆಯ ಪ್ರಕಾರ ಅನುದಾನಿತ, ಅನುದಾನರಹಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ಕಲ್ಪಿಸುವುದು ಕಡ್ಡಾಯ. ಈ ಯೋಜನೆಯ ಅನುಷ್ಠಾನ ವರದಿ ಪಡೆದು ಅನಂತರ ಅದನ್ನು ಸಹಕಾರಿ ಕಾಲೇಜುಗಳಿಗೂ ವಿಸ್ತರಿಸುವ ಚಿಂತನೆ ಇದೆ.

ಬೆಂಗಳೂರಿನ ಖಾಸಗಿ ಕಾಲೇಜೊಂದರ ಪಿಯು ವಿದ್ಯಾರ್ಥಿನಿ ಗೌತಮಿ ಗುಂಡೇಟಿಗೆ ಬಲಿಯಾದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಇಲಾಖೆ, ಸಾಮೂಹಿಕ ವಿಮೆ ಯೋಜನೆ ರೂಪಿಸಿದೆ. ಕೈಗಾರಿಕೆಗಳು, ಖಾಸಗಿ ವಾಣಿಜ್ಯ ಸಂಸ್ಥೆಗಳ ಮಾದರಿಯಲ್ಲಿಯೇ ವಿದ್ಯಾರ್ಥಿಗಳಿಗೆ ಸಾಮೂಹಿಕ ವಿಮೆ ಜಾರಿಗೊಳಿಸಲು ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಸುರಕ್ಷತೆ ಕ್ರಮಕ್ಕೆ ಸೂಚನೆ:

ರಾಜ್ಯದ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಕಾಲೇಜ್‌ಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು. ಪ್ರವೇಶಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಸಾಮೂಹಿಕ ವಿಮೆ ಕಲ್ಪಿಸುವುದು ಪ್ರತಿಯೊಂದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು 2015ರ ಜೂ. 17ರಂದು ಹೊರಡಿಸಿದ ಸುತ್ತೋಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸುಷ್ಮಾ ಗೋಡಬೋಲೆ ತಿಳಿಸಿದ್ದಾರೆ.

3,800 ಕಾಲೇಜುಗಳು:

ರಾಜ್ಯದಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಸೇರಿ ಒಟ್ಟು 3,800ಕ್ಕೂ ಹೆಚ್ಚು ಕಾಲೇಜುಗಳಿವೆ. ಈ ಕಾಲೇಜ್‌ಗಳಲ್ಲಿ ಪಿಯು ಮೊದಲ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಸೇರಿ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.

ಮಾಹಿತಿ ಕೊರತೆ: ಜಾರಿಗೆ ನಿರಾಸಕ್ತಿ
ಗ್ರಾಮೀಣ ಪ್ರದೇಶದ ಬಹುತೇಕ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಈ ಯೋಜನೆ ಕುರಿತು ಸ್ಪಷ್ಟ ಮಾಹಿತಿ ಇಲ್ಲದಾಗಿದೆ. ಅಷ್ಟೇ ಅಲ್ಲದೇ ಈ ಸುತ್ತೋಲೆಯಲ್ಲಿ ಆಡಳಿತ ಮಂಡಳಿಯವರು ಸಾಮೂಹಿಕ ವಿಮೆ ಯೋಜನೆಯಡಿ ಎಷ್ಟು ಹಣ ಪಾವತಿಸಬೇಕು? ವಿದ್ಯಾರ್ಥಿಗಳಿಂದ ಎಷ್ಟು ಪಾಲು ಸ್ವೀಕರಿಸಬೇಕು? ಯಾವ ವಿಮಾ ಕಂಪನಿಯಲ್ಲಿ ವಿಮೆ ಮಾಡಿಸಬೇಕು? ಎಂಬ ಸ್ಪಷ್ಟ ಉಲ್ಲೇಖಗಳಿಲ್ಲದೇ ಆಡಳಿತ ಮಂಡಳಿಗಳು ಗೊಂದಲಕ್ಕೆ ಸಿಲುಕಿವೆ.

Write A Comment