ಅಂತರಾಷ್ಟ್ರೀಯ

FBಗೆ ಒಳ್ಳೆ ಫೋಟೊ ಹಾಕಿ: ಪೊಲೀಸರಿಗೆ ವಾಂಟೆಡ್‌ ವ್ಯಕ್ತಿ ಮನವಿ

Pinterest LinkedIn Tumblr

48002989.cmsಮೆಲ್ಬೋರ್ನ್‌: ಆಸ್ಟ್ರೇಲಿಯಾ ಪೊಲೀಸರ ಅಧಿಕೃತ ಫೇಸ್‌ಬುಕ್‌ ಪೇಜ್‌ನ ವಾಂಟೆಡ್ ಪಟ್ಟಿಯಲ್ಲಿ ತನ್ನ ಒಳ್ಳೆಯ ಫೋಟೊ ಹಾಕುವಂತೆ ತಲೆ ತಪ್ಪಿಸಿಕೊಂಡಿರುವ ವ್ಯಕ್ತಿಯೇ ಪೊಲೀಸರಲ್ಲಿ ಮನವಿ ಮಾಡಿದ್ದಾನೆ.

ವಂಚಕನನ್ನು ಕಂಡು ಯಾರಾದರೂ ಮಾಹಿತಿ ನೀಡಬಹುದು ಎಂಬ ನಿರೀಕ್ಷೆಯೊಂದಿಗೆ ವಿಕ್ಟೋರಿಯಾ ಪೊಲೀಸರು, ಅಧಿಕೃತ ಫೇಸ್‌ಬುಕ್‌ ಪೇಜ್‌ಗೆ ಡೇನಿಯಲ್‌ ಡಾಮನ್‌ನ ಫೋಟೊ ಹಾಕಿದ್ದರು.

ಫೇಸ್‌ಬುಕ್‌ಗೆ ಫೋಟೊ ಹಾಕಿದ ತಾಸಿನೊಳಗೆ, ‘ಈ ಫೋಟೊ ಅತ್ಯಂತ ಕೆಟ್ಟದಾಗಿದೆ, ಯಾವುದಾದರೂ ಒಳ್ಳೆಯ ಫೋಟೊ ಇದ್ದರೆ ಹಾಕುತ್ತೀರಾ,’ಎಂದು ತಲೆ ಮರೆಸಿಕೊಂಡಿದ್ದ ವ್ಯಕ್ತಿಯೇ ಪೇಸ್‌ಬುಕ್‌ ಪೋಸ್ಟ್‌ಗೆ ಕಮೆಂಟ್‌ ಮಾಡಿದ್ದ.

ಅದಕ್ಕೆ ಸ್ಮಾರ್ಟ್‌ ಉತ್ತರ ನೀಡಿದ ಪೊಲೀಸರು, ‘ಸಮೀಪದ ಪೊಲೀಸ್‌ ಠಾಣೆಗೆ ಬಂದರೆ, ಒಳ್ಳೆಯ ಫೋಟೊ ತೆಗೆಯುವ ವ್ಯವಸ್ಥೆ ಮಾಡುತ್ತೇವೆ,’ಎಂದಿದರು. ಪೊಲೀಸರು ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಿದ ಕಳ್ಳ, ‘ಖಂಡಿತಾ ಬರುತ್ತೇನೆ. ಕೆಲವು ವ್ಯವಸ್ಥೆ ಆಗಬೇಕಿದೆ. ಒಳ್ಳೆಯ ಲಾಯರ್‌ ನೇಮಕವಾದ ಕೂಡಲೇ ನಿಮ್ಮನ್ನು ಕಾಣಲು ಬರುತ್ತೇನೆ,’ಎಂದು ಹೇಳಿದ್ದ.

ಫೇಸ್‌ಬುಕ್‌ನಲ್ಲಿ ಕಳ್ಳ-ಪೊಲೀಸ್‌ ಆಟ:

ಫೇಸ್‌ಬುಕ್‌ನಲ್ಲಿ ನಡೆಯುತ್ತಿದ್ದ ಕಳ್ಳ-ಪೊಲೀಸರ ಈ ಆಟ ನೋಡಿ ಕೆಲವರು ನಕ್ಕರೆ, ಇನ್ನು ಕೆಲವರು ಇದು ಉದ್ಧಟತನ ಎಂದು ಗುಡುಗಿದ್ದಾರೆ.

ಮಾದಕ ದ್ರವ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಬೇಕಾಗಿರುವ ಡಾಮನ್‌ಗೆ ಪೊಲೀಸರು ವಾರೆಂಟ್‌ ಹೊರಡಿಸಿದ್ದಾರೆ. ತಲೆಮರೆಸಿಕೊಂಡಿರುವ ಡಾಮನ್‌ ಬಂಧನಕ್ಕೆ ಜಾಲ ಬೀಸಿರುವ ಪೊಲೀಸರು ಫೇಸ್‌ಬುಕ್‌ನ ವಾಟೆಂಟ್‌ ಲಿಸ್ಟ್‌ನಲ್ಲಿ ಡಾಮನ್‌ ಫೋಟೊ ಹಾಕಿದ್ದಾರೆ. ಆಸ್ಟ್ರೇಲಿಯಾ ಪೊಲೀಸರ ಫೇಸ್‌ಬುಕ್‌ ಪೇಜ್‌ಗೆ ಬರೋಬ್ಬರಿ 2,88,000 ಫಾಲೋಯರ್‌ಗಳಿದ್ದಾರೆ.

Write A Comment