ಅಂತರಾಷ್ಟ್ರೀಯ

ನೆಲಮಾಳಿಗೆಯಲ್ಲಿತ್ತು ಮಹಾ ಯುದ್ಧದ ಟ್ಯಾಂಕ್!

Pinterest LinkedIn Tumblr

17ಬರ್ಲಿನ್: ಜರ್ಮನಿಯ ಶ್ರೀಮಂತ ವಕೀಲನೊಬ್ಬನ ಬಂಗಲೆಯ ನೆಲಮಾಳಿಗೆಯಲ್ಲಿ ಎರಡನೇ ಮಹಾಯುದ್ಧದಲ್ಲಿ ಬಳಸಲಾಗಿದ್ದ ಯುದ್ಧ ಟ್ಯಾಂಕ್‌ಗಳು, ಸಿಡಿತಲೆಗಳು ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಕೀನ್ ನಗರದ ಹೊರವಲಯದಲ್ಲಿರುವ ಹೈಕೆಂಡಾರ್ಫ್ ವಕೀಲ, ಕಾನೂನು ಮೀರಿ ಯುದ್ಧ ಕಾಲದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟ ಆರೋಪಕ್ಕೆ ಗುರಿಯಾಗಿದ್ದಾನೆ.

ಬರ್ಲಿನ್ ನ್ಯಾಯಾಲಯದ ಸರಕಾರಿ ವಕೀಲರೊಬ್ಬರು ನೀಡಿದ ದೂರಿನ ಅನ್ವಯ ವಕೀಲನ ಮನೆಯನ್ನು ಶೋಧಿಸಲಾಗಿತ್ತು. ಆಗ 1943ರಲ್ಲಿ ನಿರ್ಮಿಸಲಾಗಿದ್ದ ಟ್ಯಾಂಕ್‌ಗಳು ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರಗಳ ಜತೆ ಹಣದ ಹುಂಡಿಗಳೂ ನೆಲಮಾಳಿಗೆಯಲ್ಲಿ ಕಂಡುಬಂದವು ಎಂದು ತಿಳಿದುಬಂದಿದೆ.

ಇದೇ ನೆಲಮಾಳಿಗೆಯಲ್ಲಿ ಗುರುವಾರ 45 ಟನ್ ತೂಕದ ಯುದ್ಧ ಟ್ಯಾಂಕ್‌ವೊಂದು ಕಂಡುಬಂದಿದ್ದು ಪೊಲೀಸರು ಅದನ್ನು ಹೊರತೆಗೆಯಲು ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ ಎಂದೂ ತಿಳಿದುಬಂದಿದೆ.

ಯುದ್ಧ ಟ್ಯಾಂಕ್ ಹಾಗೂ ಅಪಾಯಕಾರಿ ಶಸ್ತ್ರಾಸ್ತ್ರಗಳು ನಿಷ್ಕೃಯೆಗೊಂಡಿವೆ ಹಾಗಾಗಿ ಅವರನ್ನು ಸಂಗ್ರಹಿಸುವುದರಲ್ಲಿ ತಪ್ಪೇನಿಲ್ಲ ಎಂದು ಬಂಗಲೆಯ ಮಾಲಿಕ ಸಮರ್ಥನೆ ನೀಡಿದ್ದಾನೆ. ಇದು ತಪ್ಪೋ ಸರಿಯೋ ಎಂಬುದು ಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.

Write A Comment