ಅಂತರಾಷ್ಟ್ರೀಯ

ಚೀನಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ ಪ್ರಧಾನಿ ಮೋದಿಯವರ ಸಂದೇಶ

Pinterest LinkedIn Tumblr

2083li-modi-647_070115114340

ಬಿಜೀಂಗ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಚೀನಾದ ಪ್ರಧಾನಿ ಲೀ ಕಿಕ್ವಿಂಗ್ ಅವರಿಗೆ ಕಳುಹಿಸಿದ್ದ ಸಂದೇಶವೊಂದು ಈಗ ಚೀನಾದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.

ಚೀನಾದ ಕಮ್ಯುನಿಸ್ಟ್ ಪಾರ್ಟಿ ತನ್ನ 94 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಚೀನಾ ಪ್ರಧಾನಿ ಲೀ ಕಿಕ್ವಿಂಗ್ ಅವರಿಗೆ ಚೀನಾದ ಸಾಮಾಜಿಕ ಜಾಲ ತಾಣ Weibo ಮೂಲಕ ಸಂದೇಶ ಕಳುಹಿಸಿದ್ದರು.

ಕೇವಲ ಒಂದು ಗಂಟೆ ಅವಧಿಯಲ್ಲಿಯೇ ಈ ಸಂದೇಶವನ್ನು ಸಹಸ್ರಾರು ಮಂದಿ ಶೇರ್ ಮಾಡಿದ್ದಾರೆ. ಟ್ವಿಟ್ಟರ್ ಚೀನಾದಲ್ಲಿ ನಿಷೇಧಕ್ಕೊಳಲ್ಪಟ್ಟಿದ್ದು Weibo ಅದರ ಸಾಮಾಜಿಕ ಜಾಲ ತಾಣವಾಗಿದೆ. Weibo ನಲ್ಲಿಯೂ ಖಾತೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ 100,000 ಕ್ಕೂ ಅಧಿಕ ಮಂದಿ ಫಾಲೋವರ್ಸ್ ಗಳನ್ನು ಇದರಲ್ಲಿ ಹೊಂದಿದ್ದಾರೆ.

Write A Comment