ಅಂತರಾಷ್ಟ್ರೀಯ

ನ್ಯೂಯಾರ್ಕ್ ಜೈಲ್ ಬ್ರೇಕ್ ಪ್ರಕರಣ: ಪರಾರಿಯಾಗಿದ್ದ ಇಬ್ಬರಲ್ಲಿ ಒಬ್ಬ ಖೈದಿ ಗುಂಡಿಗೆ ಬಲಿ

Pinterest LinkedIn Tumblr

America-Jail-Escape

ನ್ಯೂಯಾರ್ಕ್, ಜೂ.29: ಇಡೀ ಅಮೆರಿಕವನ್ನು ಬೆಚ್ಚಿಬೀಳಿಸಿದ ನ್ಯೂಯಾರ್ಕ್ ಜೈಲ್ ಬ್ರೇಕ್ ಪ್ರಕರಣ, ಪರಾರಿಯಾಗಿದ್ದ ಆರೋಪಿಗಳಿಬ್ಬರಲ್ಲಿ ಒಬ್ಬನನ್ನು ಗುಂಡಿಕ್ಕಿ ಕೊಲ್ಲುವುದರೊಂದಿಗೆ ನಿನ್ನೆ ಅಂತ್ಯಗೊಂಡಿದೆ.

ಇನ್ನೊಬ್ಬನಿಗಾಗಿ ಪೊಲೀಸರು ತೀವ್ರ ಬೇಟೆ ಆರಂಭಿಸಿದ್ದಾರೆ. ಮೂರು ವಾರಗಳ ಹಿಂದೆ ನ್ಯೂಯಾರ್ಕ್ ಜೈಲಿನ ಕಿಟಕಿ ಮುರಿದುಕೊಂಡು ವಿಚಾರಣಾಧೀನ ಖೈದಿಗಳಿಬ್ಬರು ತಪ್ಪಿಸಿಕೊಂಡಿದ್ದರು. ಅದರಲ್ಲಿ ಒಬ್ಬನನ್ನು ಪೊಲೀಸರು ನಿನ್ನೆ ಕೆನಡಾ ಗಡಿ ಬಳಿ ಗುಂಡಿಟ್ಟು ಹೊಡೆದಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅವನು ಅಲ್ಲಿ ಕೊನೆಯುಸಿರೆಳೆದಿದ್ದಾನೆ. ಸ್ಪೆಟ್ ಹಾಗೂ ರಿಚರ್ಡ್‌ಮ್ಯಾಟ್ ಇಬ್ಬರೂ ಪರಾರಿಯಾಗಿದ್ದರು. ನ್ಯೂಯಾರ್ಕ್‌ನ ಡಾನೆಮೊರ ಜೈಲಿನಲ್ಲಿ ಒಟ್ಟು 1.300 ಮಂದಿ ಖೈದಿಗಳಿದ್ದು ಇವರಿಬ್ಬರೂ ಜೂನ್ 6 ರಂದು ತಪ್ಪಿಸಿಕೊಂಡಿದ್ದರು. ನ್ಯೂಯಾರ್ಕ್‌ನಿಂದ ಕೇವಲ ಎರಡೂವರೆ ಕಿ.ಮೀ.ದೂರದಲ್ಲಿ ಸ್ಪೆಟ್ ಪತ್ತೆಯಾಗಿದ್ದ.

Write A Comment