ಅಂತರಾಷ್ಟ್ರೀಯ

ಸೈಬರ್‌ ದಾಳಿಯ ಹಿನ್ನೆಲೆ; ಕೆಲಕಾಲ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಲಾಟ್‌ ಪೋಲಿಶ್‌ ವಿಮಾನಯಾನ

Pinterest LinkedIn Tumblr

flight

ವಾರ್ಸೊ (ಎಎಫ್‌ಪಿ): ಸೈಬರ್‌ ದಾಳಿಯ ಹಿನ್ನೆಲೆಯಲ್ಲಿ, ಪೋಲಂಡ್‌ನ ಲಾಟ್‌ ಪೋಲಿಶ್‌ ವಿಮಾನಯಾನ ಸಂಸ್ಥೆ‌ ಸೋಮವಾರ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಘಟನೆ ನಡೆಯಿತು.

ಸಂಚಾರ ಸೇವೆ ಸ್ಥಗಿತಗೊಂಡ ಕಾರಣ ಸುಮಾರು 1,400ಕ್ಕೂ ಹೆಚ್ಚು ಪ್ರಯಾಣಿಕರು ವಾರ್ಸೊ ಫೆಡರಿಕ್‌ ಚಾಪಿನ್‌ ವಿಮಾನ ನಿಲ್ದಾಣದಲ್ಲೇ ಗಂಟೆಗಳ ಕಾಲ ಉಳಿಯಬೇಕಾಯಿತು.

ಪೋಲಿಶ್‌ ಏರ್‌ಲೈನ್ಸ್‌ನ ವೆಬ್‌ಸೈಟ್‌ಗೆ ಕನ್ನ ಹಾಕಿದ ಹ್ಯಾಕರ್‌ಗಳು, ವಿಮಾನದ ವೇಳಾಪಟ್ಟಿ ನಿಯಂತ್ರಣ ವ್ಯವಸ್ಥೆಯಲ್ಲಿ ಏರುಪೇರು ಮಾಡಿ, ಅದನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಿಂದ ವಿಮಾನ ಸಿಬ್ಬಂದಿಗೆ ನಿಗದಿತ ಸಮಯದಲ್ಲಿ ವಿಮಾನ ಹಾರಾಟವನ್ನು ಕ್ರಮಗೊಳಿಸಲು ಸಾಧ್ಯವಾಗಲಿಲ್ಲ. ಇದರಿಂದ 10ಕ್ಕೂ ಹೆಚ್ಚು ಹಾರಾಟಗಳನ್ನು ರದ್ದುಗೊಳಿಸಬೇಕಾಯಿತು.

ವಿಮಾನಯಾನ ಸಂಸ್ಥೆಯೊಂದರ ಮೇಲೆ ಈ ರೀತಿಯ ಸೈಬರ್‌ ದಾಳಿ ನಡೆದಿರುವುದು ಇದೇ ಮೊದಲು ಎಂದು ಪೋಲಿಶ್‌ ಏರ್‌ಲೈನ್ಸ್‌ ವಕ್ತಾರ ಆಂಡ್ರಿನ್‌ ಕ್ಯುಬಿಸ್ಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment