ಅಂತರಾಷ್ಟ್ರೀಯ

53 ವರ್ಷಗಳ ಬಳಿಕ ಮಾನಸ ಸರೋವರದ ಬಾಗಿಲು ತೆರೆದ ಚೀನಾ

Pinterest LinkedIn Tumblr

china

ಗ್ಯಾಂಗಟಕ್,ಜೂ.22: ಭಾರತ-ಚೀನಾ ಯುದ್ಧ ಹಿನ್ನೆಲೆಯಲ್ಲಿ 1962ರಿಂದಲೂ ಬಂದ್ ಮಾಡಲಾಗಿದ್ದ ಕೈಲಾಸ್ ಮಾನಸ ಸರೋವರ ಯಾತ್ರೆ ದ್ವಾರವನ್ನು ಅರ್ಧ ಶತಮಾನದ ಬಳಿಕ, ಇದೇ ಮೊದಲ ಬಾರಿಗೆ ಮುಕ್ತಗೊಳಿಸಿದ ಚೀನಾದ ಭಾರತ ರಾಯಭಾರಿ ಲಿ ಯೆಚೆಂಗ್ ಇಂದು ಮುಂಜಾನೆ ಮೊದಲನೇ ಯಾತ್ರಾರ್ಥಿಗಳ ತಂಡವೊಂದನ್ನು ಸ್ವಾಗತಿಸಿ ಬರ ಮಾಡಿಕೊಂಡರು.

ಕಳೆದ ರಾತ್ರಿಯೇ ಸಿಕ್ಕಿಂ ರಾಜಧಾನಿ ಗ್ಯಾಂಗಟಕ್‌ಗೆ ಆಗಮಿಸಿದ ರಾಯಭಾರಿ ಲಿಯೆಚೆಂಗ್ ಯಾತ್ರಿಗಳ ತಂಡದ ಬರವಿಗಾಗಿ ಇಡೀ ರಾತ್ರಿ ನೂತನ ದ್ವಾರವಾದ ನಾತು ಲಾಪಾಸ್ ಬಳಿ ತಮ್ಮ ಹಲವು ಸಿಬ್ಬಂದಿಯ ಜೊತೆ ಕಾದಿದ್ದರು. ಟಿಬೆಟ್‌ನ ಸ್ವಾಯತ್ತ ಭೂಪ್ರದೇಶದಲ್ಲಿ ಯಾತ್ರಿಗಳನ್ನು ಬರಮಾಡಿಕೊಳ್ಳಲು ಮಾಡಿಕೊಂಡಿರುವ ಅಗತ್ಯ ಏರ್ಪಾಡುಗಳ ಬಗ್ಗೆ ಚೀನಾ ರಾಯಭಾರಿ ಲಿ ಯೆಚೆಂಗ್ ಅವರು ಇದಕ್ಕೂ ಮುನ್ನ ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರನ್ನು ಭೇಟಿ ಮಾಡಿ ವಿವರ ನೀಡಿದ್ದರು. ಇಬ್ಬರೂ ನಾಯಕರ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಚೀನಾ ಭೇಟಿ ಹಾಗೂ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಕೆಲ ಸಮಯ ಮಾತುಕತೆ ನಡೆಸಿದರು.

Write A Comment