ಅಂತರಾಷ್ಟ್ರೀಯ

ಆಸ್ಪತ್ರೆ ಸೇರಿದಾಗ ಬಯಲಾಯಿತು 17 ಹುಡುಗಿಯರ ಜತೆಗಿನ ಸಂಬಂಧ !

Pinterest LinkedIn Tumblr

1216Chinese-Man’s-Numerous-Affairs-Exposed-As-All-17-Girlfriends-Show-Up-To-See-Him-In-Hospital

ಇದು ಗ್ರಹಚಾರವೋ ಅಥವಾ ಅದೃಷ್ಟ ಕೈಕೊಟ್ಟಿದ್ದೋ ಎಂಬುದನ್ನು ನೀವೇ ಹೇಳಿ. ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಸಂಬಂಧಿಕರಿಗೆ ಆಸ್ಪತ್ರೆಗೆ ಬರುವಂತೆ ಕರೆ ಮಾಡಿದಾಗ ಬರೊಬ್ಬರಿ 17 ಜನ ಯುವತಿಯರು ಬಂದು ಆತನನ್ನು ಮಲಗಿಸಿದ್ದ ಬೆಡ್ ಸುತ್ತ ಬಂದು ನಿಂತು ಆತನ ರಹಸ್ಯ ಬಯಲಾದ ಘಟನೆ ನಡೆದಿದೆ.

ಹೌದು. ಚೀನಾದ ಯುಆನ್ ಎಂಬ ವ್ಯಕ್ತಿಯೊಬ್ಬ ಅಪಘಾತದಿಂದ ಗಾಯಗೊಂಡಿದ್ದ. ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ಸೇರಿಸಿ ಆತನ ಮೊಬೈಲ್ ನಿಂದ ಅಲ್ಲಿರುವ ನಂಬರ್ ಗಳಿಗೆ ಕಾಲ್ ಮಾಡಿದ್ದಾರೆ. ಎಷ್ಟೆಂದರೂ ಬಾಯ್ ಫ್ರೆಂಡ್ ತಾನೇ. ಆತಂಕಗೊಂಡ ಹುಡುಗಿಯರು ಆಸ್ಪತ್ರೆಗೆ ಧಾವಿಸಿದ್ದಾರೆ. ಆಗ ಈ ರಹಸ್ಯ ಹೊರಬಿದ್ದಿದ್ದು ಈ 17 ಜನರಲ್ಲಿ ಒಬ್ಬರಿಗೂ ಆತ ತಮ್ಮನ್ನು ಬಿಟ್ಟು ಬೇರೆ ಹುಡುಗಿಯ ಜತೆ ಅಫೇರ್ ಹೊಂದಿರುವುದು ಗೊತ್ತಿರಲಿಲ್ಲವಂತೆ. ಕೆಲ ತಿಂಗಳುಗಳಿಂದ ಪ್ರೇಮ ಸಂಬಂಧ ಹೊಂದಿದವರ ಜತೆಗೆ 9 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದವರು ಸಹ ಆ ಗುಂಪಿನಲ್ಲಿದ್ದರು ಎನ್ನಲಾಗಿದ್ದು, ಅದರಲ್ಲಿ ಒಬ್ಬಾಕೆಯಂತೂ ಆತ ಕರುಣಿಸಿದ ಮಗುವನ್ನು ಎತ್ತಿಕೊಂಡೇ ಬಂದಿದ್ದಳು.

ಇಷ್ಟಾದ ಮೇಲೆ ಕೇಳಬೇಕೆ ಅಪಘಾತದಿಂದ ಗಾಯಗೊಂದವನಿಗೆ ದಿಗಿಲು ಬಡಿದಂತಾಗಿದೆ. ಇನ್ನು ಆತನ ಮೇಲೆ ನಂಬಿಕೆ ಇಟ್ಟ ಹುಡುಗಿಯರಂತೂ ಆಕ್ರೋಶ ವ್ಯಕ್ತಪಡಿಸಿದ್ದು ಈತನಿಗೆ ಅಪಘಾತವಾಗಿದ್ದು ಯೋಗ್ಯವಾಯಿತು ಎಂದು ಶಪಿಸಿ ಅಲ್ಲಿಂದ ಹೊರಟರಂತೆ. ಅಷ್ಟೇ ಅಲ್ಲ, ಅವರೆಲ್ಲರೂ ಈಗ ಒಂದಾಗಿ ಸೇರಿ ಸಾಮಾಜಿಕ ಜಾಲ ತಾಣದಲ್ಲಿ ತಮ್ಮದೇ ಆದ ಒಂದು ಗ್ರೂಪ್ ಮಾಡಿಕೊಂಡು ಆತನಿಂದ ಯಾವ ಯಾವ ರೀತಿಯಲ್ಲಿ ಅನ್ಯಾಯವಾಗಿದೆ ಎಂಬ ಬಗ್ಗೆ ಚರ್ಚಿಸುತ್ತಿದ್ದಾರಂತೆ.

ಸಾಮಾಜಿಕ ಜಾಲ ತಾಣದಲ್ಲಿ ಈ ವಿಲಕ್ಷಣ ಕಥೆ ವೈರಲ್ ಆಗಿ ಹರಿದಾಡುತ್ತಿದೆ. ಕೆಲವರು ಆತನ ಕೃತ್ಯಕ್ಕೆ ತೀವೃ ಆಕ್ರೋಶ ವ್ಯಕ್ತಪಡಿಸಿದರೆ ಪಡ್ಡೆ ಹುಡುಗರು ಆತ ಒಂದೇ ಸಲ 17 ಲವ್ವರ್ಸ್‌ಗಳನ್ನು ಸಂಭಾಳಿಸಿದ್ದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದು ಆತನಿಂದ ವಂಚನೆಗೊಳಗಾದ ಹುಡುಗಿಯರು ಇದೀಗ ಲಾಟರಿ ಮೂಲಕ ಆಯ್ಕೆ ಮಾಡುತ್ತಾರೋ ಎಂಬುದನ್ನು ಮಾತ್ರ ಕಾಯ್ದು ನೋಡಬೇಕಿದೆ.

Write A Comment