ರಾಷ್ಟ್ರೀಯ

ಕೇರಳದ ಬಸ್ ನಿಲ್ದಾಣದಲ್ಲಿ ಪೋರ್ನ್ ಚಿತ್ರ ಪ್ರದರ್ಶನ !!

Pinterest LinkedIn Tumblr

20118bus-stand

ಕೇರಳದ ಕಲ್ಪಟ್ಟಾ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪ್ರಯಾಣಿಕರಿಗೆ ಇದ್ದಕ್ಕಿದ್ದಂತೆ ಶಾಕ್ ಆಗುವ ಘಟನೆ ನಡೆದಿದ್ದು ಸ್ವತಃ ನಿಲ್ದಾಣದ ಟಿ.ವಿಗಳಲ್ಲಿ ಬರುತ್ತಿದ್ದ ನೀಲಿ ಚಿತ್ರಗಳನ್ನು ನೋಡಿ ಅಧಿಕಾರಿಗಳೇ ದಂಗುಬಡಿದ ಘಟನೆ ನಡೆದಿದೆ.

ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ನಿಲ್ದಾಣದಲ್ಲಿದ್ದ ಟಿ ವಿ ಗಳಲ್ಲಿ ಇದ್ದಕ್ಕಿದ್ದಂತೆ ಪೋರ್ನ್ ಮೂವಿ ಪ್ರಸಾರವಾಗಲು ಆರಂಭಿಸಿತು. ಕೆಲ ಪಡ್ಡೆ ಹುಡುಗರು ಈ ದೃಶ್ಯಗಳನ್ನು ಕಣ್ತುಂಬಿಕೊಂಡರೆ ಪ್ರಯಾಣಿಕರು ತೀವ್ರ ಮುಜುಗರಕ್ಕೆ ಒಳಗಾದರು. ಸುಮಾರು 30 ನಿಮಿಷಗಳ ಕಾಲ ಪೋರ್ನ್ ಮೂವಿ ತಡೆ ಇಲ್ಲದೇ ಪ್ರಸಾರವಾದ್ದು ತದ ನಂತರ ಅಧಿಕಾರಿಗಳು ಕೇಬಲ್ ವೈರನ್ನ ಕಟ್ ಮಾಡಿ ನಿಟ್ಟುಸಿರು ಬಿಟ್ಟರು.

ಸ್ಥಳೀಯ ಕೇಬಲ್ ಆಪರೇಟರ್ ಮನ್ಸೂರ್  ಎಂಬಾತ ಪೋರ್ನ್ ಮೂವಿ ಇದ್ದ ತನ್ನ ವೈಯಕ್ತಿಕ ಯುಎಸ್ ಬಿಯನ್ನು ಅಚಾನಕ್ಕಾಗಿ ಕನೆಕ್ಟ್ ಮಾಡಿದ್ದರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದ್ದು ಇದೀಗ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Write A Comment