ಅಂತರಾಷ್ಟ್ರೀಯ

ಹೇಗಿದ್ರು ಹೇಗಾದ್ರು ಗೊತ್ತಾ ಒಬಾಮಾ ಪುತ್ರಿಯರು !

Pinterest LinkedIn Tumblr

obama

ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿಯರು ಈಗ ಸಂಪೂರ್ಣ ಬದಲಾಗಿದ್ದಾರೆ. ಪಾರ್ಟಿಗಳಲ್ಲಿ ಚೆಂದನೆಯ ಡ್ರೆಸ್ ಧರಿಸದ ಕಾರಣಕ್ಕೆ ಅಧ್ಯಕ್ಷೀಯ ಕಚೇರಿ ಸಿಬ್ಬಂದಿಗಳಿಂದಲೇ ಟೀಕೆಗೊಳಗಾಗಿದ್ದ ಒಬಾಮಾರ ಪುತ್ರಿಯರು ಈಗ ವಿಧ ವಿಧವಾದ ಡ್ರೆಸ್ ಗಳಲ್ಲಿ ಕಂಗೊಳಿಸುತ್ತಿದ್ದಾರೆ.

ಪ್ರಸ್ತುತ ತಾಯಿ ಮಿಶೆಲ್ ಒಬಾಮಾ ಜೊತೆ ಯುರೋಪ್ ಪ್ರವಾಸ ಕೈಗೊಂಡಿರುವ ಮಲಿಯಾ ಹಾಗೂ ಸಾಶಾ ಒಬಾಮಾ ಸಾಕಷ್ಟು ಆತ್ಮ ವಿಶ್ವಾಸ ಹೊಂದಿದವರಂತೆ ಕಾಣುತ್ತಿದ್ದಾರೆ. ಭಾರೀ ಸಂಕೋಚ ಸ್ವಭಾವದವರಾಗಿದ್ದ ಮಲಿಯಾ ಹಾಗೂ ಸಾಶಾ ಅಮೆರಿಕಾ ಅಧ್ಯಕ್ಷರ ಅಧಿಕೃತ ನಿವಾಸ ವೈಟ್ ಹೌಸ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಆಗ ಅವರಿನ್ನೂ ಚಿಕ್ಕವರಾಗಿದ್ದ ಕಾರಣ ಡ್ರೆಸ್ ಕೋಡ್ ಬಗ್ಗೆಯೂ ಅರಿವಿರುತ್ತಿರಲಿಲ್ಲವೆನ್ನಲಾಗಿದೆ. ಇದನ್ನು ಗಮನಿಸಿಯೇ ಅಧ್ಯಕ್ಷ ಕಚೇರಿ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ಒಬಾಮಾ ಪುತ್ರಿಯರನ್ನು ಟೀಕೆ ಮಾಡಿ ಕೆಲಸವನ್ನೇ ಕಳೆದುಕೊಂಡಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ತಾಯಿ ಮಿಶೆಲ್ ಒಬಾಮಾ ಇಬ್ಬರೂ ಪುತ್ರಿಯರನ್ನು ಈಗ ತಯಾರು ಮಾಡಿದ್ದು, ಯುರೋಪ್ ಪ್ರವಾಸದ ವೇಳೆ ತಾಯಿ ಮಿಶೆಲ್ ಒಬಾಮಾರನ್ನು ಬಿಟ್ಟೇ ಬಾಡಿಗಾರ್ಡ್ ಗಳ ಜೊತೆ ಇಬ್ಬರು ಸಹೋದರಿಯರು ಶಾಪಿಂಗ್ ಮಾಡಿದ್ದಾರೆ. ಅಲ್ಲದೇ ಗಣ್ಯರ ಭೇಟಿ ವೇಳೆಯೂ ಮಲಿಯಾ ಹಾಗೂ ಸಾಶಾ ಘನತೆಯುತ್ತವಾಗಿ ನಡೆದುಕೊಂಡಿದ್ದಾರೆ. ಅವರ ದಿರಿಸಿನಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದು, ಬ್ರಿಟನ್ ಮಾಧ್ಯಮಗಳು ಇವರಿಬ್ಬರ ದಿನಚರಿಯನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡುತ್ತಿವೆ. ಅವರ ಫೋಟೋಗಳು ಬ್ರಿಟನ್ ಪತ್ರಿಕೆಗಳ ಮುಖಪುಟದಲ್ಲಿ ಕಂಗೂಳಿಸುತ್ತಿವೆ. ಇದುವರೆಗೂ ತೆರೆಮರೆಯಲ್ಲಿಯೇ ಇರುತ್ತಿದ್ದ ಒಬಾಮಾ ಪುತ್ರಿಯರು ಈಗ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

Write A Comment