ಅಂತರಾಷ್ಟ್ರೀಯ

ತಂಟೆ ಮಾಡಿದ ಪುಟ್ಟ ಮಗುವಿನ ಕಿವಿಗೆ ಸ್ಟೆಪ್ಲರ್ ಪಿನ್ ಹಾಕಿ ಪ್ರತಾಪ ತೋರಿದ ಶಿಕ್ಷಕಿ !

Pinterest LinkedIn Tumblr

bab

ಬೀಜಿಂಗ್: 4 ವರ್ಷದ ಮಕ್ಕಳು ತಂಟೆ ಮಾಡಿದರೆ ಶಿಕ್ಷಕಿಯಾದವಳು ಅಬ್ಬಬ್ಬ ಅಂದರೆ ಏನ್ ಶಿಕ್ಷೆ ನೀಡಬಹುದು ಜೋರು ಮಾಡಬಹುದು ಅಥವಾ ಇನ್ನು ಸಿಟ್ಟು ಬಂದಲ್ಲಿ ಮಗುವಿಗೆ ಹೊಡೆಯಬಹುದು. ಆದರೆ ಚೀನಾದಲ್ಲಿ ಕಿಂಡರ್‍ಗಾರ್ಟನ್‍ಗೆ ಸೇರಿದ 4 ವರ್ಷದ ಮಗು ತಂಟೆ ಮಾಡಿದ್ದಕ್ಕೆ ಮಗುವಿನ ಕಿವಿಗೆ ಸ್ಟೆಪ್ಲರ್ ಪಿನ್ ಹಾಕುವ ಮೂಲಕ ತನ್ನ ಪ್ರತಾಪ ತೋರಿಸಿದ್ದಾಳೆ.

ಫ್ಯುಜಿಯನ್ ಪ್ರಾಂತ್ಯದಲ್ಲಿಕಳೆದ ವಾರ ಈ ಘಟನೆ ನಡೆದದ್ದು, ಮನೆಯಲ್ಲಿ ಬಾಲಕನ ತಾಯಿ ಸ್ನಾನ ಮಾಡಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ವಿಚಾರ ಗೊತ್ತಾದ ಕೂಡಲೇ ತಾಯಿ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿಯ ವರ್ತನೆಯನ್ನು ಪ್ರಕಟಿಸಿದ್ದಾಳೆ. ಸುದ್ದಿ ತಿಳಿದ ಕೂಡಲೇ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಿದೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರ ಆಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ವಿಚಾರ ತಿಳಿದ ಕೂಡಲೇ ಕಿಂಡರ್‍ಗಾರ್ಟನ್ ಶಾಲೆಯ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಪೋಷಕರ ಮನೆಗೆ ತೆರಳಿ ಕ್ಷಮೆ ಕೇಳಿದ್ದಾರೆ.

Write A Comment