ರಾಷ್ಟ್ರೀಯ

60 ವರ್ಷದ ತಾಯಿಯ ಮೇಲೇ ಅತ್ಯಾಚಾರ ನಡೆಸಿದ ಮಗನ ಬಂಧನ

Pinterest LinkedIn Tumblr

rape

ಅಹ್ಮದಾಬಾದ್, ಜೂ.15: ತನ್ನ 60 ವರ್ಷದ ತಾಯಿಯ ಮೇಲೇ ಅತ್ಯಾಚಾರ ನಡೆಸಿದ ಮಗನನ್ನು ಪೊಲೀಸರು ಬಂಧಿಸಿರುವ ಅತ್ಯಂತ ಪಾಶವೀ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ವತ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಈ ದುಷ್ಕೃತ್ಯ ನಡೆಸಿದ್ದ 29 ವರ್ಷದ ಪುತ್ರನನ್ನು ಇಂದು ಬೆಳಗ್ಗೆ ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ವತ್ಯಾ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಬಿ.ರಾಣಾ ತಿಳಿಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಿಂದ ಇಲ್ಲಿಗೆ ವಲಸೆ ಬಂದಿರುವ ಈ ಕುಟುಂಬ ವತ್ಯಾ ವ್ಯಾಪ್ತಿಯಲ್ಲಿ ವಾಸವಾಗಿದ್ದಾರೆ. ತನ್ನ ಮಗ ನಿನ್ನೆ ರಾತ್ರಿ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ ಎಂದು ನೊಂದ ತಾಯಿ ದೂರಿದ್ದಾಳೆ.

ಆರೋಪಿ ಮಗನ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಿಳೆಯನ್ನು ಚಿಕಿತ್ಸೆ ಹಾಗೂ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಣಾ ಹೇಳಿದ್ದಾರೆ.

Write A Comment