ಕರ್ನಾಟಕ

ಮನೆಯ ಬಾಡಿಗೆ ಹಣ ಕೊಡದ ನಟ ಯಶ್ ವಿರುದ್ಧ ದೂರು ದಾಖಲಿಸಿದ ಮನೆ ಮಾಲೀಕ

Pinterest LinkedIn Tumblr

yash

ಬೆಂಗಳೂರು: ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ, ರಾಕಿಂಗ್ ಸ್ಟಾರ್ ಯಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಯಶ್ ಅವರು ಕಳೆದ ಒಂದು ವರ್ಷದಿಂದ ಕತ್ರಿಗುಪ್ಪೆಯಲ್ಲಿರುವ ತಾವು ವಾಸಿಸುವ ಮನೆಯ ಬಾಡಿಗೆ ನೀಡಿಲ್ಲ ಮತ್ತು ಬಾಡಿಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಡಾ.ಎಂ. ಮುನಿಪ್ರಸಾದ್ ಅವರು ಯಶ್ ಹಾಗೂ ಅವರ ತಾಯಿ ಪುಷ್ಪ ವಿರುದ್ಧ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುನಿಪ್ರಸಾದ್ ಅವರು ಕಳೆದ ಮಾರ್ಚ್ 20ರಂದೇ ಯಶ್ ಹಾಗೂ ಅವರ ತಾಯಿ ವಿರುದ್ಧ ದೂರು ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Write A Comment