ವಾಷಿಂಗ್ಟನ್, ಜೂ.12-ಅಮೆರಿಕದ ಪ್ರಮುಖ ಸ್ಥಳಗಳನ್ನು ಸ್ಫೋಟಿಸುವ ವಿಧ್ವಂಸಕಾರಿ ಸಂಚು ರೂಪಿಸಿದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನದ ಸಹೋದರರಿಬ್ಬರಿಗೆ ಕ್ರಮವಾಗಿ 35 ವರ್ಷ ಹಾಗೂ 20 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. ಫ್ಲೋರಿಡಾದ ಫೆಡರಲ್ ನ್ಯಾಯಾಧೀಶರು, 22 ವರ್ಷದ ರೇಯಿಸ್ ಅಲಂ ಖಾಜಿ
ಹಾಗೂ 32 ವರ್ಷದ ಷಿಹರ್ಯಾ್ರ್ ಅಲಂ ಖಾಜಿ ಎಂಬ ಸಹೋದರರಿಗೆ ಕ್ರಮವಾಗಿ 35 ಮತ್ತು 20 ವರ್ಷಗಳ ಶಿಕ್ಷೆ ವಿಧಿಸಿ ನಿನ್ನೆ ರಾತ್ರಿ ತೀರ್ಪು ನೀಡಿದ್ದಾರೆ. ಪಾಕಿಸ್ತಾನ ಮೂಲದ ಅಮೆರಿಕ ಪ್ರಜೆಗಳಾಗಿರುವ ಇವರು 2012ರಲ್ಲಿ ನ್ಯೂಯಾರ್ಕ್‌ಗೆ ತೆರಳಿದ್ದ ಇವರಲ್ಲಿ ರೆಯಿಸ್ ಅಲಂ ಖಾಜಿ ಈ ಸ್ಫೋಟ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಅಮೆರಿಕದ ವಾಲ್‌ಸ್ಟ್ರೀಟ್, ಟೈಮ್ಸ್‌ಸ್ಕೈರ್ ಮತ್ತಿತರೆ ಪ್ರಮುಖ ಪ್ರದೇಶಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಐಎಸ್‌ಐ ಬೆಂಬಲಿತ ಲಷ್ಕರ್-ಎ-ತೊಯ್ಬಾ ಮೂಲಕ ಡೆವಿಡ್ ಹೆಡ್ಲಿ ಮುಂಬೈಯಲ್ಲಿ ನಡೆಸಿದ್ದ ಸ್ಫೋಟಗಳ ಮಾದರಿಯಲ್ಲೇ ಇವರು ಸಂಚು ರೂಪಿಸಿದ್ದರು.
