ಅಂತರಾಷ್ಟ್ರೀಯ

ಮೈಕ್ರೋಸಾಫ್ಟ್ ನಿಂದ ಶೀಘ್ರವೇ ಸ್ಕೈಪ್ ಟ್ರಾನ್ಸ್ ಲೇಟರ್ ಬಿಡುಗಡೆ

Pinterest LinkedIn Tumblr

skype

ವಾಷಿಂಗ್ ಟನ್: ಸ್ಕೈಪ್ ನಲ್ಲಿ ಅನುವಾದಕ(ಟ್ರಾನ್ಸ್ ಲೇಟರ್)ನ್ನು ಬಿಡುಗಡೆ ಮಾಡಲು ಮೈಕ್ರೋಸಾಫ್ಟ್ ಸಂಸ್ಥೆ ಸಿದ್ಧತೆ ನಡೆಸಿದೆ. ಕಳೆದ 6 ತಿಂಗಳಿನಿಂದ ನಡೆಯುತ್ತಿದ್ದ ಅನುವಾದಕ ಸೌಲಭ್ಯದ ಪೂರ್ವವೀಕ್ಷಣೆ ಮುಕ್ತಾಯಗೊಂಡಿದ್ದು ಕೆಲವೇ ದಿನಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.

ವಿಂಡೋಸ್ ಡೆಸ್ಕ್ ಟಾಪ್ ಪಿಸಿಗಳ ಸ್ಕೈಪ್ ಆಫ್ ಗಳಿಗೆ ನೇರವಾಗಿ ಸ್ಕೈಪ್ ಟ್ರಾನ್ಸ್ ಲೇಟರ್ ಸಾಫ್ಟ್ ವೇರ್ ಪರಿಚಯಿಸಲು ಮೈಕ್ರೋ ಸಾಫ್ಟ್ ಯೋಜನೆ ರೂಪಿಸಿದ್ದು ಆಹ್ವಾನ ಕಳಿಸುವ ಷರತ್ತು ರಹಿತ ಪೂರ್ವವೀಕ್ಷಣೆಯ ಸೌಲಭ್ಯವನ್ನು ಒದಗಿಸಲಿದೆ.

ಮೈಕ್ರೋ ಸಾಫ್ಟ್ ತಯಾರಿಸಿರುವ ಸಾಫ್ಟ್ ವೇರ್ ಪ್ರಸ್ತುತ ಇಂಗ್ಲೀಶ್, ಸ್ಪ್ಯಾನಿಷ್, ಇಟಾಲಿಯನ್, ಮ್ಯಾಂಡರಿನ್ ಭಾಷೆಗಳು ಲಭ್ಯವಿದ್ದು, ಸ್ಕೈಪ್  ವಿಡಿಯೋ ಕರೆ ಮೂಲಕ ಮಾತನ್ನು ಭಾಷಾಂತರಿಸುವ ಸೌಲಭ್ಯವು ಇರಲಿದೆ. ಬಳಕೆ ಮಾಡುವುದಕ್ಕೂ ಮುನ್ನ ಇತರರಿಗೆ ಆಹ್ವಾನ ಕಳಿಸುವ ಷರತ್ತು ತೆಗೆದುಹಾಕಿದ ನಂತರ ಸ್ಕೈಪ್ ಅನುವಾದಕ ಬಳಕೆಯಲ್ಲಿ ಶೇ.300 ರಷ್ಟು ಏರಿಕೆ ಕಂಡುಬಂದಿದೆ ಎಂದು ಮೈಕ್ರೋ ಸಾಫ್ಟ್ ತಿಳಿಸಿದೆ. ಸ್ಕೈಪ್ ಅನುವಾದಕ ಶೀಘ್ರವೇ ವಿಶ್ವಾದ್ಯಂತ ಜಾರಿಗೆ ಬರಲಿದೆ.

Write A Comment