ಅಂತರಾಷ್ಟ್ರೀಯ

ಅಂತರ್ಜಾಲದಲ್ಲಿ ಲೈಂಗಿಕ ವಿಚಾರ ಕುರಿತು ಹೆಚ್ಚು ಚರ್ಚಿಸ್ತಾರಂತೆ ವಯಸ್ಕರು

Pinterest LinkedIn Tumblr

863593425_webಅಂತರ್ಜಾಲ ತಾಣಗಳು ಇಂದು ಹೆಚ್ಚೆಚ್ಚು ಆಪ್ತವಾಗುತ್ತಿವೆ. ತಮ್ಮ ಲೈಂಗಿಕ ಅನುಭವಗಳನ್ನು ಇತರೆಯವರೊಂದಿಗೆ ನೇರವಾಗಿ ಹಂಚಿಕೊಳ್ಳಲು ಮುಜುಗರಪಟ್ಟುಕೊಳ್ಳುವ ಹಲವರು ಅಂತರ್ಜಾಲ ತಾಣದ ಮೂಲಕ ಇದನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಸಂಶೋಧನೆಯೊಂದು ವರದಿ ಮಾಡಿದೆ.

ಅಮೆರಿಕಾದ ಇಲಿನಾಯ್ಸ್ ವಿಶ್ವ ವಿದ್ಯಾನಿಲಯ ಸಂಶೋಧಕಿ ಪ್ರೊಫೆಸರ್ ಲಿಜಾ ಈ ಕುರಿತು ತಮ್ಮ ವರದಿ ನೀಡಿದ್ದು, ಅಮೆರಿಕಾದಲ್ಲಿ 60 ದಾಟಿದ ವೃದ್ದರು ಲೈಂಗಿಕ ವಿಷಯದ ಬಗ್ಗೆ ಮಾತನಾಡಲು ಮುಂದಾದರೆ ಸಮಾಜ ಅವರುಗಳನ್ನು ತಿರಸ್ಕಾರ ಭಾವದಿಂದ ನೋಡುತ್ತದೆ. ಹಾಗಾಗಿ ಇವರುಗಳು ತಮ್ಮ ಮನೋಕಾಮನೆಗಳನ್ನು ಅಂತರ್ಜಾಲದಲ್ಲಿ ವ್ಯಕ್ತಪಡಿಸುವ ಮೂಲಕ ಅದನ್ನು ಹೊರ ಹಾಕುತ್ತಾರೆ ಎನ್ನುತ್ತಾರೆ.

ಅಂತರ್ಜಾಲ ತಾಣಗಳಲ್ಲಿ ಸಾಮೂಹಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಇವರುಗಳು ತಮ್ಮ ತಮ್ಮ ಸಂಗಾತಿಗಳ ಬಗ್ಗೆ, ವಯಸ್ಕರ ಜೋಕ್ ಗಳು, ವೃದ್ಯಾಪದಲ್ಲಿನ ಲೈಂಗಿಕ ಸಾಮರ್ಥ್ಯದ ಕುರಿತೇ ಹೆಚ್ಚು ಮಾತನಾಡುತ್ತಾರೆಂದು ಹೇಳಲಾಗಿದೆ. ಅದರಲ್ಲೂ ಲೈಂಗಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ವಿಷಯ ಪ್ರಕಟವಾದಲ್ಲಿ ಅದನ್ನು 5,000 ಕ್ಕೂ ಅಧಿಕ ಮಂದಿ ವೀಕ್ಷಿಸುವುದೂ ಕಂಡು ಬಂದಿದೆ ಎನ್ನಲಾಗಿದೆ.

ಲೈಂಗಿಕ ವಿಚಾರ ಮಾತನಾಡಿದರೆ ದೊಡ್ಡ ಅಪರಾಧವೆಂದು ಭಾವಿಸುವ ಭಾರತದಲ್ಲೂ ಈಗ ಮುಕ್ತ ಲೈಂಗಿಕ ಚರ್ಚೆಯ ಪ್ರತಿಪಾದನೆಯನ್ನು ಬಾಲಿವುಡ್ ತಾರೆಯರೂ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪ್ರತಿಪಾದಿಸುತ್ತಿದ್ದಾರೆ. ಅಲ್ಲದೇ ಶಾಲಾ ದಿನಗಳಲ್ಲಿ ಲೈಂಗಿಕ ವಿಷಯವನ್ನು ಶಿಕ್ಷಣದ ಮೂಲಕ ತಿಳಿಸಿಕೊಡುವುದು ಸೂಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Write A Comment