ಅಂತರಾಷ್ಟ್ರೀಯ

ಆರ್ಥಿಕಾಭಿವೃದ್ಧಿ: ಚೀನಾ ಹಿಂದಿಕ್ಕಿದ ಭಾರತ

Pinterest LinkedIn Tumblr

india-money

ವಾಷಿಂಗ್‌ಟನ್: ದೇಶದ ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಭಾರತ- ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್ ಗುರುವಾರ ಹೇಳಿದೆ.

ಭಾರತ ತನ್ನ ಆರ್ಥಿಕಾಭಿವೃದ್ಧಿ ಪ್ರಗತಿಯನ್ನು ಶೇ. 7.5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಹೇಳಿದ್ದಾರೆ. ಪ್ರಸ್ತುತ ಚೀನಾ ದೇಶದ ಆರ್ಥಿಕ ಪ್ರಗತಿ ಶೇ.7.1ರಷ್ಟಿದೆ. ಭಾರತದಲ್ಲಿನ ಪ್ರಸಕ್ತ ಆರ್ಥಿಕ ಕ್ಷೇತ್ರದಲ್ಲಿನ ಸುಧಾರಣೆಗಳು ಮತ್ತು ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿಯ ಕಚ್ಛಾತೈಲ ಬೆಲೆ ಇಳಿಕೆ ವಾಣಿಜ್ಯೋದ್ಯಮ ರಂಗದ ಚೇತರಿಕೆಗೆ ಕಾರಣವಾಗಿದ್ದು, ಇದೇ ಕಾರಣದಿಂದಾಗಿ ದೇಶದ ಆರ್ಥಿಕ ಪ್ರಗತಿ ದರದಲ್ಲಿ ಹೆಚ್ಚಳವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಆರ್ಥಿಕ ಹಿನ್ನಡೆಯ ಹೊತ್ತಿನಲ್ಲಿಯೂ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ತೆಗೆದು ಕೆಲ ಪ್ರಮುಖ ಮತ್ತು ದಿಟ್ಟ ನಿರ್ಣಯಗಳು ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೆಚ್ಚಾಗಿ ಹೂಡಿಕೆ ಮಾಡಲು ಕಾರಣವಾಗಿದೆ. ಬಂಡವಾಳ ಹೂಡಲು ವಿದೇಶಿ ಹೂಡಿಕೆದಾರರಲ್ಲಿ ಭಾರತದ ಬಗ್ಗೆ ಮೂಡಿರುವ ವಿಶ್ವಾಸದಿಂದಾಗಿ ವಿದೇಶಗಳಿಂದ ಭಾರತಕ್ಕೆ ಬರುತ್ತಿರುವ ವಿದೇಶಿ ಬಂಡವಾಳದ ಒಳ ಅರಿವು ಹೆಚ್ಚಿದೆ ಮತ್ತು ಇದು ಭಾರತ 2015ರ ಸಾಲಿನಲ್ಲಿ ಆರ್ಥಿಕಾಭಿವೃದ್ಧಿಯನ್ನು ಶೇ. 7.5ರಷ್ಟು ಸಾಧಿಸಲು ಪೂರಕವಾಗಿದೆ ವಿಶ್ವಬ್ಯಾಂಕ್ ಹೇಳಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳ 2015ರ ಸಾಲಿನ ಆರ್ಥಿಕಾಭಿವೃದ್ಧಿ ಪ್ರಗತಿ ದರ ಶೇ. 4.4 ರಿಂದ ಶೇ. 5.2 ಮತ್ತು 2016ಕ್ಕೆ ಶೇ. 5.2 ಮತ್ತು 2017ಕ್ಕೆ ಶೇ. 5.4 ಪ್ರಗತಿಯಲ್ಲಿ ಸಾಗಲಿದೆ ಎಂದೂ ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ ಹೇಳಿದೆ.

Write A Comment