ಅಂತರಾಷ್ಟ್ರೀಯ

ಜೇನು ಹುಳದಿಂದಾಗಿ ತುರ್ತು ಭೂಸ್ಪರ್ಶ ಮಾಡಿದ ವಿಮಾನ !

Pinterest LinkedIn Tumblr

flybe

ಸೌತಾಂಪ್ಟನ್: ಅಪರೂಪದಲ್ಲಿ ಅಪರೂಪ ಎಂಬಂತೆ ಇಂಗ್ಲೆಂಡ್‍ನ ಸೌತಾಂಪ್ಟನ್‍ನಿಂದ ಡಬ್ಲಿನ್‍ಗೆ ತೆರಳಿದ್ದ ವಿಮಾನ ಜೇನು ಹುಳದಿಂದಾಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.

ಕಳೆದ ಶನಿವಾರ ಫ್ಲೈಬಿ ಕಂಪೆನಿಗೆ ಸೇರಿದ್ದ ವಿಮಾನ ಟೇಕಾಫ್ ಆದ 10 ನಿಮಿಷದ ಒಳಗಡೆ ವಿಮಾನದ ರೆಕ್ಕೆಯಲ್ಲಿ ಏನೋ ತಾಂತ್ರಿಕ ದೋಷವಿದೆ ಎನ್ನುವುದು ಪೈಲೆಟ್‍ಗೆ ಗೊತ್ತಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಪೈಲೆಟ್ ವಿಮಾನವನ್ನು ಸೌತಾಂಪ್ಟನ್‍ವಿಮಾನ ನಿಲ್ದಾಣದಲ್ಲಿ ಕೂಡಲೇ ಇಳಿಸಿದ್ದಾರೆ.

ವಿಮಾನ ಲ್ಯಾಂಡ್ ಆದ ಕೂಡಲೇ ನಿಲ್ದಾಣದಲ್ಲಿದ್ದ ತಂತ್ರಜ್ಞರು ಧಾವಿಸಿ ಪರಿಶೀಲಿಸಿದಾಗ ವಿಮಾನದ ಹೊರಗಡೆಯ ಒಂದು ಸಾಧನದ ಒಳಗಡೆ ಜೇನು ಹುಳ ಇರುವುದು ಪತ್ತೆ ಆಯಿತು. ಕೂಡಲೇ ಇದನ್ನು ತೆಗೆದರೂ 2 ಗಂಟೆಯ ನಂತರ ಮತ್ತೆ ವಿಮಾನ ಡಬ್ಲಿನ್ ಕಡೆಗೆ ಪ್ರಯಾಣ ಬೆಳೆಸಿತು.

ವಿಮಾನಕ್ಕೆ ಕೀಟಗಳು ಅಪಾಯಕಾರಿಯಾಗಿದ್ದು ಈ ಹಿಂದೆ 2 ಬಾರಿ ಕೀಟಗಳಿಂದಲೇ ದೊಡ್ಡ ದುರಂತ ಸಂಭವಿಸಿದೆ. 1996ರಲ್ಲಿ ಡೊಮೆನಿಕನ್ ರಿಪಬ್ಲಿಕ್ ದೇಶದಲ್ಲಿ ಬೋಯಿಂಗ್ 757 ವಿಮಾನ ಟೇಕ್ ಆಫ್ ಆದ ಕೂಡಲೇ ಪತನ ಹೊಂದಿ ವಿಮಾನದಲ್ಲಿದ್ದ 189 ಜನ ಪ್ರಯಾಣಿಕರು ಮೃತಪಟ್ಟಿದ್ದರು. ನಂತರ ಈ ದುರಂತಕ್ಕೆ ಪಿಟೋಟ್ ಟ್ಯೂಬ್‍ನೊಳಗೆ ಸೇರಿದ್ದ ಕಣಜ ಹುಳಗಳು ಕಾರಣ ಎಂದು ಪತ್ತೆಯಾಗಿತ್ತು.

1980ರಲ್ಲಿ ಫ್ಲೋರಿಡಾದ ಕಮ್ಯೂಟರ್ ಏರ್‍ಲೈನ್ಸ್ ವಿಮಾನದ ಪಿಟೋಟ್ ಟ್ಯೂಬ್‍ನ ಒಳಗಡೆ ಕಣಜ ಹುಳ ನುಗ್ಗಿದ್ದ ಕಾರಣ ವಿಮಾನ ಅಟ್ಲಾಂಟಿಕ್ ಸಾಗರದಲ್ಲಿ ಪತನ ಹೊಂದಿ 34 ಜನರು ಮೃತಪಟ್ಟಿದ್ದರು.

Write A Comment