ಅಂತರಾಷ್ಟ್ರೀಯ

ಚೀನಾ ಹಡಗು ದುರಂತದಲ್ಲಿ ಈವರೆಗೆ ಒಟ್ಟು 350 ಶವ ಪತ್ತೆ

Pinterest LinkedIn Tumblr

Chin

ಬೀಜಿಂಗ್, ಜೂ.6-ಚೀನಾದ ಯಾಂಗ್‌ಷಿ ನದಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಡಗು ದುರಂತದಲ್ಲಿ  438 ಮಂದಿ ಪ್ರಯಾಣಿಕರು ನಾಪತ್ತೆಯಾದ ನಂತರ ಇದೀಗ 350 ಮೃತದೇಹಗಳು ಪತ್ತೆಯಾಗಿವೆ ಎಂದು ರಕ್ಷಣಾ ತಂಡದ ಅಧಿಕಾರಿಗಳು ಹೇಳಿದ್ದಾರೆ.  458 ಮಂದಿಯಿದ್ದ ಈಸ್ಟನ್‌ಸ್ಥಾರ್ ಹಡಗು ಬಿರುಗಾಳಿಗೆ ಸಿಕ್ಕಿ ಯಾಂಗ್‌ಷಿ ನದಿಯಲ್ಲಿ ಕಳೆದ ಸೋಮವಾರ ಮುಳಗಿತ್ತು.

ಆ ಸಂದರ್ಭ 20 ಜನರನ್ನು ಮೀನುಗಾರರು ರಕರ್ಷಿುಸಿದ್ದರು.  ಪ್ರಯಾಣಿಕರು ಜೀವಂತವರಿಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿನ್ನೆವರೆಗೂ ಯಾರೂ ಸಿಕ್ಕಲಿಲ್ಲ. ಇಲ್ಲಿಯವರೆಗೆ 350 ಮೃತ ದೇಹಗಳು ದೊರೆತಿದ್ದು, ಯಾರೂ ಬದುಕುಳಿದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment