ರಾಷ್ಟ್ರೀಯ

ಈತನ ಮದುವೆಗೆ ಕುತ್ತು ತಂದಿದ್ದು ವಿಗ್ !!

Pinterest LinkedIn Tumblr

MARRIAGE

ಕೆಲವೊಮ್ಮೆ ಮದುವೆಗಳು ವರದಕ್ಷಿಣೆ, ಅಥವಾ ವರ ಅಥವಾ ವಧು ಸರಿ ಇಲ್ಲವೋ ಹೀಗೆ ಏನಾದರೊಂದು ಕಾರಣದಿಂದ ಮುರಿದು ಬಿದ್ದ ದೃಷ್ಟಾಂತಗಳಿವೆ. ಆದರೆ ಇಲ್ಲೊಂದು ಮದುವೆ ವರನ ‘ತಲೆ’ಯ ವಿಷಯವಾಗಿ ಮುರಿದು ಬಿದ್ದಿದೆ.

ಹೌದು. ಉತ್ತರ ಪ್ರದೇಶದ ಮುಜಫ್ಪರ್‌ನಗರ ಜಿಲ್ಲೆಯ ದಾಖೆಡಿ ಹಳ್ಳಿಯಲ್ಲಿ ಸಾಜಿದ್‌ ಎಂಬುವವರ ಜೊತೆ ಅಮ್ರಿನ್‌ ಅವರ ವಿವಾಹ ನಿಶ್ಚಯವಾಗಿತ್ತು. ಅದರಂತೆ ಮದುವೆ ದಿಬ್ಬಣ ಆಯೋಜಿಸಲಾಗಿತ್ತು. ಈ ಸಮಯದಲ್ಲಿ  ಕಪ್ಪಾದ ಹೊಳೆಯುತ್ತಿದ್ದ ಗುಂಗುರು ಕೂದಲಿನಿಂದ ಕಂಗೊಳಿಸುತ್ತಿದ್ದ ವರನನ್ನು ನೋಡಿದ  ಅಜ್ಜಿಯೊಬ್ಬರು ಆಶೀರ್ವಾದ ಮಾಡುವ ಸಲುವಾಗಿ ಮದುಮಗನ ತಲೆ ಸವರಿದ್ದು ಆಗ ಆತ ತೊಟ್ಟಿದ್ದ ವಿಗ್‌ ಕಳಚಿಬಿತ್ತು.

ನೋಡಿದರೆ ಮದುಮಗನ ಬೊಕ್ಕ ತಲೆ ಮಿರಿ ಮಿರಿ ಮಿಂಚತೊಡಗಿತ್ತು. ಇದನ್ನು ನೋಡಿದ ವಧು ಈ ವರನೂ ಬೇಡ. ಮದುವೆಯೂ ಬೇಡ ಎಂದು ಪಟ್ಟು ಹಿಡಿದಿದ್ದು ಎಷ್ಟೇ ಸಮಾಧಾನ ಮಾಡಿದರೂ ಆತನೊಂದಿಗೆ ಮದುವೆಯಾಗಲು ವಧು ಒಪ್ಪಲೇ ಇಲ್ಲ.

ಅಷ್ಟೇ ಅಲ್ಲ, ಈ ಘಟನೆಯಿಂದ ಸಿಟ್ಟಿಗೆದ್ದ ವಧುವಿನ ಪೋಷಕರು ಮತ್ತು ಸಂಬಂಧಿಕರು ಮದುವೆಗೆ ಮಾಡಿದ್ದ ಖರ್ಚನ್ನು ವರನ ಪೋಷಕರು ನೀಡಬೇಕೆಂದು ಪಟ್ಟುಹಿಡಿದಿದ್ದು ಕೊನೆಗೆ ಗ್ರಾಮದ ಮುಖ್ಯಸ್ಥರು ಮಧ್ಯಪ್ರವೇಶಿಸಿ ಖರ್ಚನ್ನು ಕೊಡಿಸುವುದಾಗಿ ವಾತಾವರಣವನ್ನು ತಣ್ಣಗಾಗಿಸಿದರು.

Write A Comment