ಅಂತರಾಷ್ಟ್ರೀಯ

ಮೊಸಳೆ ಚರ್ಮದ ಬ್ಯಾಗ್ 1.42 ಕೋ. ರೂ. ಮಾರಾಟ..!

Pinterest LinkedIn Tumblr

bag

ಹಾಂಕಾಂಗ್, ಜೂ.3: ಯುವತಿಯರ ಮನ ಸೆಳೆಯಲೆಂದೇ ಮಾರುಕಟ್ಟೆಗೆ ವಿಭಿನ್ನವಾದ ಹ್ಯಾಂಡ್ ಬ್ಯಾಗ್‌ಗಳು ಲಗ್ಗೆ ಇಡುತ್ತವೆ. ಹಾಗೆಯೇ ಅವುಗಳ ಬೆಲೆಯೂ ದುಬಾರಿಯಾಗಿರುತ್ತದೆ. ಆದರೆ ಹಾಂಕಾಂಗ್‌ನಲ್ಲಿ ಮೊಸಳೆ ಚರ್ಮದಿಂದ ವಿನ್ಯಾಸವಾದ ಬ್ಯಾಗೊಂದು ಬರೋಬ್ಬರಿ 1 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿ ದಾಖಲೆ ಬರೆದಿದೆ.

ಸೋಮವಾರ ಹಾಂಕಾಂಗ್‌ನಲ್ಲಿ ಕ್ರಸ್ಟಿ ಎನ್ನುವವರು ನಡೆಸಿದ ಹರಾಜಿನಲ್ಲಿ ಪಿಂಕ್ ಬಣ್ಣದ ಬ್ಯಾಗೊಂದು ಬರೋಬ್ಬರಿ $222,912 (ಅಂದಾಜು 1.42 ಕೋಟಿ ರೂ.)ಗೆ ಮಾರಾಟವಾಗಿದೆ.

ಪಿಂಕ್ ಬಣ್ಣದ ಈ ಬ್ಯಾಗನ್ನು ಪೋರೋಸಸ್ ಪ್ರಭೇದಕ್ಕೆಸೇರುವ ಮೊಸಳೆ ಚರ್ಮದಿಂದ ತಯಾರಿಸಲಾಗಿದ್ದು, ಬ್ಯಾಗ್‌ನ ಅಂದವನ್ನು ಹೆಚ್ಚಿಸಲು 18 ಕ್ಯಾರೆಟ್‌ನ ಬಿಳಿ ಚಿನ್ನ ಹಾಗೂ ಡೈಮಂಡ್‌ನ ಹರಳುಗಳನ್ನು ಬಳಸಲಾಗಿದೆ. ಈ ಬ್ಯಾಗ್ 35 ಸೆ.ಮೀ ಅಗಲವಿದ್ದು, 25 ಸೆ.ಮೀ ಎತ್ತರವಿದೆ. ಕ್ರಿಸ್ಟಿ ಅವರು ಅಂದಾಜಿಸಿದ್ದ 15 ಪಟ್ಟು ಹೆಚ್ಚು ಮೊತ್ತಕ್ಕೆ ಈ ಬ್ಯಾಗ್ ಮಾರಾಟವಾಗಿದ್ದು ದಾಖಲೆ ಸೃಷ್ಟಿಸಿದೆ.

ಫ್ರೆಂಚ್ ಭಾಷೆಯ ಹಾಡುಗಾರ್ತಿ ಜೇನ್ ಬಿರ್ಕಿನ್ ಅವರ ಖ್ಯಾತಿಯನ್ನು ಬಳಸಿಕೊಂಡು ಈ ಹ್ಯಾಂಡ್ ಬ್ಯಾಗಿಗೂ ‘ಬಿರ್ಕಿನ್’ ಎಂಬ ಬ್ರ್ಯಾಂಡ್ ಹೆಸರು ಸೂಚಿಸಲಾಗಿದೆ. ಇದರ ಜೊತೆಗೆ ಇನ್ನೂ 300 ಬ್ರಾಂಡೆಡ್‌ನ ಬ್ಯಾಗ್‌ಗಳು ಈ ಹರಾಜಿನಲ್ಲಿ ಮಾರಾಟವಾಗಿದೆ. ಅದರಲ್ಲಿ ‘ಕೆಲ್ಲಿ’ ಎಂಬ ಬ್ರಾಂಡಿನ ಬ್ಯಾಗೊಂದು 9.3 ಲಕ್ಷ ರೂ. ಮಾರಾಟವಾಗಿದೆ.

Write A Comment