ಮನೋರಂಜನೆ

ಬೀದಿ ನಾಯಿಗಳ ರಕ್ಷಣೆಗೆ ಸಾನಿಯಾ

Pinterest LinkedIn Tumblr

Sania-Mirza1

ನವದೆಹಲಿ, ಜೂ.3: ಭಾರತದ ನಂ. 1 ಮಹಿಳಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪ್ರಾಣಿ ರಕ್ಷಣಾ ಸಂಘಟನೆಯಾದ ಪೇಟಾಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಗತಿಕ ನಾಯಿ, ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳುವುದರ ಕುರಿತು ಅರಿವು ಮೂಡಿಸುವ ಈ ಜಾಹೀರಾತಿನಲ್ಲಿ ಸಾನಿಯಾ ಬೀದಿನಾಯಿಗಳ ಮತ್ತು ಬೆಕ್ಕುಗಳ ನಡುವೆ ದೇವದೂತೆ ರೀತಿಯಲ್ಲಿ ವೇಷ ಧರಿಸಿ ನಿಂತಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಉತ್ತರಿಸಿದ ಸಾನಿಯಾ, “ಎಷ್ಟೋ ಪ್ರಾಣಿಗಳು, ವಿಶೇಷವಾಗಿ ನಾಯಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣ ಬಿಡುತ್ತವೆ ಅಥವಾ ನರಳಾಡುತ್ತ ರಸ್ತೆಯಲ್ಲಿ ಬಿದ್ದಿರುತ್ತವೆ. ನಾವು ಹಣ ಕೊಟ್ಟು ನಾಯಿಗಳನ್ನು ತರುವ ಬದಲು ಬೀದಿನಾಯಿಗಳನ್ನು ರಕ್ಷಿಸಬೇಕು ಮತ್ತು ಮನೆಗೆ ತಂದು ಸಾಕಬೇಕು”, ಎಂದಿದ್ದಾರೆ.

ನಿರ್ಗತಿಕ ಪ್ರಾಣಿಗಳ ಜೀವನದಲ್ಲಿ ಸಂತೋಷ, ನೆಮ್ಮದಿಯನ್ನು ತರುವುದೇ ಈ ಜಾಹೀರಾತಿನ ಉದ್ದೇಶ ಎಂದು ಪೇಟಾ ತಿಳಿಸಿದೆ.

Write A Comment