ವಾಷಿಂಗ್ಟನ್, ಜೂ.2 – ಹಿಂಸಾಚಾರ, ಭಯೋತ್ಪಾದನೆ ಹಾಗೂ ಬಡತನಗಳ ವಿರುದ್ಧ ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಹಿಲರಿ ಕ್ಲಿಂಟನ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹಿಂಸೆ, ದೌರ್ಜನ್ಯ,
ಭಯೋತ್ಪಾದನೆ ಹಾಗೂ ಬಡತನಗಳನ್ನು ಮೂಲೋಚ್ಛಾಟನೆ ಮಾಡುವ ನಿಟ್ಟಿನಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬೇಕಿದೆ. ಸದ್ಯದಲ್ಲೇ ನಡೆಯಲಿರುವ ಅಂತಾರಾಷ್ಟ್ರೀಯ ಅಹಿಂಸಾ ವಿಶ್ವ ಭಾರತೀಯ 10ನೇ ವಾರ್ಷಿಕೋತ್ಸವದ ಸಮಾವೇಶವು ಇದಕ್ಕೆ ವೇದಿಕೆಯಾಗಲಿದೆ ಎಂದು ತಮ್ಮನ್ನು ಭೇಟಿ ಮಾಡಿದ ಜೈನ ಧಾರ್ಮಿಕ ನಾಯಕ ಡಾ.ಲೋಕೇಶ್ ಮುನಿ ನಿಯೋಗಕ್ಕೆ ಹಿಲರಿ ಹೇಳಿದರು. ನಿಯೋಗದಲ್ಲಿ ಅಹಿಂಸಾ ವಿಶ್ವ ಭಾರತೀಯ ಅಂತಾರಾಷ್ಟ್ರೀಯ ಸಮಿತಿಯ ಸಂಚಾಲಕ ಕರಂಜೀತ್ ಸಿಂಗ್ ಥಾಲಿವಾಲಾ, ಕಾಂಗ್ರೆಸ್‌ನ ಜ್ಯೋಕ್ರೌಲಿ ಹಾಗೂ ಗ್ರೇಸ್‌ಮೆಂಗ್ ಮತ್ತಿತರರಿದ್ದರು.
