ರಾಷ್ಟ್ರೀಯ

ದೇಶಾದ್ಯಂತ ಫ್ರೀ ರೋಮಿಂಗ್‌: ಬಿಎಸ್‌ಎನ್‌ಎಲ್‌ ಆಫರ್‌

Pinterest LinkedIn Tumblr

bs

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಜೂನ್‌ 15ರಿಂದ ದೇಶಾದ್ಯಂತ ಫ್ರೀ ರೋಮಿಂಗ್‌ ಸೌಲಭ್ಯ ಒದಗಿಸಲಿದೆ. ಜತೆಗೆ, ಮುಂದಿನ ತಿಂಗಳಿನಿಂದ ಸಂಪೂರ್ಣ ಮೊಬೈಲ್‌ ಪೋರ್ಟಬಲಿಟಿ ಸೌಲಭ್ಯವನ್ನೂ ನೀಡಲಿದೆ.

ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ಪ್ರಮುಖ ಪ್ರವಾಸಿ ತಾಣಗಳಲ್ಲಿ ಬಿಎಸ್‌ಎನ್‌ಎಲ್‌ ವೈ-ಫೈ ಸ್ಪಾಟ್ಸ್‌ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ರವಿ ಶಂಕರ್‌ ಪ್ರಸಾದ್‌ ಮಂಗಳವಾರ ತಿಳಿಸಿದ್ದಾರೆ. ಈ ವರ್ಷ ಸುಮಾರು 2,500 ವೈ-ಫೈ ಸ್ಪಾಟ್ಸ್‌ ಆರಂಭಿಸಲು ಸರಕಾರ ಉದ್ದೇಶಿಸಿದೆ.

‘ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್ ಲಾಭದಾಯಿಕ ಉದ್ಯಮಗಳನ್ನಾಗಿಸುವ ನಿಟ್ಟಿನಲ್ಲಿ ಎನ್‌ಡಿಎ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಹಣಕಾಸು ವರ್ಷದಲ್ಲಿ ಬಿಎಸ್‌ಎನ್‌ಎಲ್‌ ಲಾಭ ಶೇ.2.1 ರಷ್ಟು ಏರಿಕೆ ಆಗಿದೆ,’ ಎಂದು ಅವರು ತಿಳಿಸಿದ್ದಾರೆ.

ಟ್ರಾಯ್‌ ಆದೇಶದನ್ವಯ ಬಿಎಸ್ಎನ್‌ಎಲ್‌ ಮೇನಲ್ಲಿ ತನ್ನ ಪ್ರೀಪೇಡ್‌ ಹಾಗೂ ಪೋಸ್ಟ್‌ ಪೇಡ್‌ ಗ್ರಾಹಕರಿಗೆ ರೋಮಿಂಗ್‌ ದರವನ್ನು ಶೇ. 40ರಷ್ಟು ಕಡಿತಗೊಳಿಸಿತ್ತು. ಜತೆಗೆ, ಸ್ಥಿರ ದೂರವಾಣಿ ಗ್ರಾಹಕರಿಗೆ ರಾತ್ರಿ ಉಚಿತ ಕರೆ ‌ಸೌಲಭ್ಯ ಒದಗಿಸಿದೆ.

Write A Comment