ಅಂತರಾಷ್ಟ್ರೀಯ

77 ವರ್ಷಗಳ ಬಳಿಕ 102 ವರ್ಷದ ಜರ್ಮನ್ ಮಹಿಳೆಗೆ ಸಿಕ್ಕಿತು ಡಾಕ್ಟರೇಟ್!

Pinterest LinkedIn Tumblr

ingeborg-rapoport

ಯಹೂದಿ ಎಂಬ ಕಾರಣಕ್ಕೆ ಹ್ಯಾಂಬರ್ಗ್ ವಿವಿಯಿಂದ ಪದವಿ ನಿರಾಕರಣೆ, ಗೌರವಕ್ಕೆ ಅಡ್ಡಿ ಬಂದದ್ದು ಜನಾಂಗೀಯ ದ್ವೇಷ

ಬರ್ಲಿನ್: ಪಿಎಚ್.ಡಿ ಪಡೆಯಲು ಎಷ್ಟು ವರ್ಷ ಬೇಕು? ಭಾರತದಲ್ಲಿನ ವಿವಿ ನಿಯಮ ಪ್ರಕಾರ ನೋಂದಣಿ ಮeಡಿಕೊಂಡ ದಿನದಿಂದ 5 ವರ್ಷಗಳ ಒಳಗಾಗಿ ಅದನ್ನು ಪೂರ್ತಿ ಮಾಡಬೇಕು. ಆದರೆ ಜರ್ಮನಿ ಮಹಿಳೆ ಬರೋಬ್ಬರಿ 77 ವರ್ಷಗಳ ಬಳಿಕ ಡಾಕ್ಟರೇಟ್ ಪಡಕೊಂಡಿದ್ದಾರೆ.

ಅದರಲ್ಲೇನು ವಿಶೇಷ ಅಂತೀರಾ? ಇದೊಂದು ಅಂದ ಕಾಲತ್ತಿಲ್ ಕತೆಯಾದರೂ ಮಹತ್ವದ್ದಾಗಿದೆ. ಬರ್ಲಿನ್‍ನ ಇಂಗ್‍ಬೋರ್ಗ್ ರ್ಯಾಪರೋ ಪೋರ್ಟ್ ಅವರೇ ಇಂಥ ಸಾಧನೆ ಮಾಡಿದ ಮಹಿಳೆ. 1938ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಅವರು ಡಿಫ್ತೀತೀರಿಯಾ(ಗಂಟಲಮಾರಿ) ಮೇಲೆ ಮಹಾಪ್ರಬಂಧ ಬರೆದಿದ್ದರು. ಅದನ್ನು ಅವರು ಹ್ಯಾಂಬರ್ಗ್ ವಿವಿಗೆ ಸಲ್ಲಿಸಿದ್ದರು. ಇದೇ ಅವಧಿ ಯಲ್ಲಿ 2ನೇ ವಿಶ್ವ ಮಹಾಯುದ್ಧಕ್ಕೆ ಪೂರಕವಾಗಿ ಸಿದ್ಧತೆ ನಡೆಯುತ್ತಿದ್ದವು.

ಜರ್ಮನಿಯ ಹಿಟ್ಲರ್ ಯಹೂದಿಗಳ ಮೇಲೆ ಕೆಂಗಣ್ಣಿನಿಂದ ನೋಡುತ್ತಿದ್ದ ಕಾಲವದು. ಇದಕ್ಕೆ ಪೂರಕವೋ ಎಂಬಂತೆ ರ್ಯಾಪೋ ಪೋರ್ಟ್ ರ ತಾಯಿ ಯಹೂದಿಯಾಗಿದ್ದರು. ಹೀಗಾಗಿ ಅವರ ಪಿಎಚ್.ಡಿ ಪರೀಕ್ಷೆ ಅರ್ಜಿಯನ್ನು ಹಳದಿ ಬಣ್ಣದಲ್ಲಿ ಮಾರ್ಕ್ ಮಾಡಲಾಗಿತ್ತು. ನಿರ್ಣಾಯಕ ಮೌಖಿಕ ಪರೀಕ್ಷೆಯಿಂದಲೂ ಅವರಿಗೆ ನಿಷೇಧ ಹೇರಲಾಗಿತ್ತು. ಇಂಥ ಜನಾಂಗೀಯ ಕೋಪದ ದೃಷ್ಟಿಕೋನದಿಂದಾಗಿ ಬಲವಂತವಾಗಿ ರ್ಯಾಪೋ ಪೋರ್ಟ್‍ಗೆ ಡಾಕ್ಟರೇಟ್ ನಿರಾಕರಿಸಲಾಯಿತು.

9ರಂದು ಸ್ವೀಕಾರ

ಕಳೆದ ವರ್ಷ ಅವರ ಮಗ ಹಾರ್ವರ್ಡ್‍ನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿರುವ ಟೋಮ್ ಹ್ಯಾಂಬರ್ಗ್ ವಿವಿಯನ್ನು ಸಂಪರ್ಕಿಸಿ ತಾಯಿಗೆ ಡಾಕ್ಟರೇಟ್ ಪದವಿ ನೀಡುವಂತೆ ಮನವಿ ಮಾಡಿದ್ದರು.

ಆಕೆ ನಿಯಮಗಳನ್ನು ಪಾಲಿಸಿ ಮೌಖಿಕ ಪರೀಕ್ಷೆಗೆ ಹಾಜರಾಗುವಂತೆ ವಿವಿಯು ಸೂಚಿಸಿತ್ತು. ನವಜಾತ ಶಿಶುವಿನ ವೈದ್ಯಶಾಸ್ತ್ರದಲ್ಲಿ ರ್ಯಾಪೊಪೋರ್ಟ್ ಪರಿಣತೆಯಾಗಿದ್ದು ಡಿಫ್ತೀರಿಯಾ ಬಗ್ಗೆ ಹಲವು ತಿಂಗಳ ಕಾಲ ಅಧ್ಯಯನ ನಡೆಸಿ, ತನ್ನ ಫ್ಲಾಟ್ ನಲ್ಲೇ ನಡೆದ ಮೌಖಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. `ನನ್ನ ವೈದ್ಯಕೀಯ ಅಸ್ತಿತ್ವವನ್ನು ಅವಶೇಷಗಳಡಿ ಸೇರಿಸಲಾಯಿತು. ಇದು ವಿಜ್ಞಾನ ಹಾಗೂ ಜರ್ಮನಿಗೆ ಅವಮಾನ’ ಎಂದು ರ್ಯಾಪೋ ಪೋರ್ಟ್ ತಿಳಿಸಿದ್ದಾರೆ. ಜೂನ್ 9ರಂದು ನಡೆಯುವ ಸಮಾರಂಭದಲ್ಲಿ ರ್ಯಾಪೋಪೋರ್ಟ್ ಡಾಕ್ಟರೇಟ್ ಪದವಿ ಸ್ವೀಕರಿಸಲಿದ್ದಾರೆ.

ಅವರೇ ಹಿರಿಯರು

ಡಾಕ್ಟರೇಟ್ ಪಡೆಯುತ್ತಿರುವ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಯನ್ನೂ ರ್ಯಾಪೋಪೋರ್ಟ್ ಪಡೆದಿದ್ದಾರೆ. ಗಿನ್ನಿಸ್ ದಾಖಲೆ ಪ್ರಕಾರ 97 ವರ್ಷದ ಜರ್ಮನ್ ವ್ಯಕ್ತಿಯೊಬ್ಬರೇ ಈವರೆಗೆ ಡಾಕ್ಟರೇಟ್ ಪದವಿ ಪಡೆದ ಅತಿ ಹಿರಿಯ ವ್ಯಕ್ತಿಯಾಗಿದ್ದರು.

ಅವರು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಯಸ್ಸನ್ನು ಗಣನೆಗೆ ತೆಗೆದುಕೊಂಡರೆ, ಆಕೆಯ ಬುದ್ಧಿಮತ್ತೆ ಅದ್ಭುತವಾಗಿದೆ. 77 ವರ್ಷಗಳ ಬಳಿಕವೂ ಆ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದಾರೆ.

-ಯುವೆ ಕೋಚ್ ಗ್ರೋಮಸ್, ಹ್ಯಾಂಬರ್ಗ್ ವಿವಿ ಡೀನ್

Write A Comment